CrimeFeatured Story

ದೆಹಲಿ: ದಲಿತ ಬಾಲಕಿಯ ಭೀಕರ ಅತ್ಯಾಚಾರ, ಕೊಲೆ ಪ್ರಕರಣ – ಹದೆಗೆಟ್ಟ ಕಾನೂನು ವ್ಯವಸ್ಥೆ, ಅಮಿತ್ ಶಾ ಟಾರ್ಗೆಟ್!

ಹೊಸದಿಲ್ಲಿ: ಒಂಬತ್ತು ವರ್ಷದ ದಲಿತ ಬಾಲಕಿಯ ಅತ್ಯಾಚಾರ ಮತ್ತು ಬೀಭತ್ಸ ರೀತಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಗೃಹ ಸಚಿವ ಅಮಿತ್ ಶಾ ಅವರನ್ನು ಗುರಿಯಾಗಿಸಿಕೊಂಡು ರಾಷ್ಟ್ರ ರಾಜಧಾನಿಯಲ್ಲಿನ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸಿವೆ.ಅದರೊಂದಿಗೆ ಆರೋಪಿಗಳ ವಿರುದ್ಧ ದೆಹಲಿ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.

ದೆಹಲಿಯ ಮಹಿಳಾ ಹಕ್ಕು ಆಯೋಗ ಇದೀಗ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ. ಸಂತ್ರಸ್ಥ ಮೃತ ಬಾಲಕಿಯ ಪೋಷಕರ ಪ್ರಕಾರ ಅವರನ್ನು ಅತ್ಯಾಚಾರ ಮಾಡಿ ಕೊಂದು ಬಲವಂತವಾಗಿ ಸುಟ್ಟು ಹಾಕಿರುವ ಆರೋಪ ಮಾಡಲಾಗಿದೆ.

ಅವಳ ತಪ್ಪೇನು? ಅವಳ ಹೊರತು ನಾನು ಹೇಗೆ ಇರಲಿ? ಎಂಬ ತಾಯಿಯ ಅಳಲು ಇಡೀ ದೇಶದ ಮನಕುಲುಕಿದೆ. ಇದೀಗ ಸಾರ್ವಜನಿಕರು ನ್ಯಾಯಕ್ಕಾಗಿ ಬೇಡಿಕೆ ಇಟ್ಟು ಪ್ರತಿಭಟನೆಗೆ ಇಳಿದಿದ್ದು ಮಂಗಳವಾಗ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಝಾದ್ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿ ನ್ಯಾಯಕ್ಕಾಗಿ ಆಗ್ರಹಿಸಿದರು.

ರಾಹುಲ್ ಗಾಂಧಿ ಸಂತ್ರಸ್ಥ ಕುಟುಂಬದ ಮನೆಗೆ ಭೇಟಿ:

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇಂದು ಸಂತ್ರಸ್ಥ ಕುಟುಂಬದ ಮನೆಗೆ ಭೇಟಿ ನೀಡಿದರು. ನಂತರ ಮಾತನಾಡಿದ ರಾಹುಲ್, ‘ನಾನು ಸಂತ್ರಸ್ಥ ಕುಟುಂಬದ ಮನೆಗೆ ಭೇಟಿ ನೀಡಿದೆ. ಅವರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಮತ್ತೇನು ಅಲ್ಲ. ನಮಗೆ ನ್ಯಾಯ ಸಿಗುವುದಿಲ್ಲವೆಂದು ಅಳುತ್ತಿದ್ದಾರೆ. ನಾವು ಅವರ ನ್ಯಾಯದ ಹೋರಾಟದಲ್ಲಿ ಜೊತೆಯಾಗಲಿದ್ದೇವೆ ಎಂದು ಹೇಳಿದರು.

ರಾಹುಲ್ ಗಾಂಧಿ ಈ ಭೀಕರ ಕೃತ್ಯಕ್ಕೆ ಬಲಿಯಾದ ದಲಿತ ಬಾಲಕಿಯನ್ನು ‘ದೇಶದ ಮಗಳು’ ಎಂದು ಮಂಗಳವಾರ ಹೇಳಿ ಸೂಕ್ತ ನ್ಯಾಯಕ್ಕಾಗಿ ಆಗ್ರಹಿಸಿದ್ದರು. ಈಗಾಗಲೇ ಪೊಲೀಸರು ಪೋಸ್ಕೊ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ಧಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button