ಅಬಕಾರಿ ದಾಳಿ ನಡೆಸಿ ೩೬,೦೦೦ ರೂ. ಮೌಲ್ಯದ ಸ್ವದೇಶಿ ಮದ್ಯ ಹಾಗೂ ದ್ವಿಚಕ್ರ ವಾಹನ ಜಪ್ತಿ

ಕಲಬುರಗಿ,ಜೂ.೦೨-(ಕ.ವಾ)-ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಮದ್ಯ ಮಾರಾಟದ ಸಮಯ ನಿಗದಿಪಡಿಸಲಾಗಿದೆ. ಈ ಸಂದರ್ಭದಲ್ಲಿ ಅಕ್ರಮವಾಗಿ ಮದ್ಯ ಸಾಗಾಣ ಕೆ ಮಾಡುವÀವರನ್ನು ಪತ್ತೆ ಮಾಡಲು ಅಬಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಬುಧವಾರ (ಜೂನ್ ೨ರಂದು) ಜೇವರ್ಗಿ ಪಟ್ಟಣದಲ್ಲಿ ಅಬಕಾರಿ ದಾಳಿ ನಡೆಸಿ ಸ್ವದೇಶಿ ಮದ್ಯ ಹಾಗೂ ಒಂದು ದ್ವಿಚಕ್ರ ವಾಹನವನ್ನು ಜಪ್ತಿಪಡಿಸಲಾಗಿದೆ. ಈ ಜಪ್ತಿ ಮಾಡಿದ ಮುದ್ದೇಮಾಲಿನ ಹಾಗೂ ವಾಹನದ ಅಂದಾಜು ಒಟ್ಟು ಮೌಲ್ಯ ೩೬,೦೦೦ ರೂ. ಇರುತ್ತದೆ ಎಂದು ಕಲಬುರಗಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಮಹ್ಮದ್ ಇಸ್ಮಾಯಿಲ್ ಇನಾಮದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲಬುರಗಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ಕಲಬುರಗಿ ಡಿ.ಸಿ.ಇ.ಐ.ಬಿ ಅಬಕಾರಿ ನಿರೀಕ್ಷಕರು ಹಾಗೂ ಸಿಬ್ಬಂದಿಗಳೊAದಿಗೆ ಬುಧವಾರ ಜೂನ್ ೨ ರಂದು ಬೆಳಿಗ್ಗೆ ೧೦ ಗಂಟೆಗೆ ಜೇವರ್ಗಿ ಪಟ್ಟಣದ ಬಸ್‌ನಿಲ್ದಾಣ ಎದುರುಗಡೆಯ ಮುಖ್ಯ ರಸ್ತೆಯಲ್ಲಿ ರಸ್ತೆಕಾವಲು ಮಾಡುತ್ತಿದ್ದಾಗ ಅಕ್ರಮವಾಗಿ ಒಂದು ಹೀರೋ ಹೊಂಡಾ ಸ್ಪೆಲೆಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ೧೮೦ ಎಂ.ಎಲ್. ಪ್ರಮಾಣದ ೪೮ ಟೆಟ್ರಾ ಪ್ಯಾಕೇಟುಗಳು, ಓರಿಜನಲ್ ಚೊಯಿಸ್ ವಿಸ್ಕಿ ಮತ್ತು ೧೮೦ ಎಂ.ಎಲ್. ಪ್ರಮಾಣದ ೪೮ ಟೆಟ್ರಾ ಪ್ಯಾಕುಗಳು, ಬ್ಯಾಗ್‌ಪೈಪರ್ ವಿಸ್ಕಿ ಮದ್ಯವನ್ನು ಜಪ್ತಿ ಮಾಡಿಕೊಂಡು ಕಲಬುರಗಿ ಡಿ.ಸಿ.ಇ.ಐ.ಬಿ. ಅಬಕಾರಿ ನಿರೀಕ್ಷಕರಾದ ಗೋಪಾಳೆ ಪಂಡಿತ ಅವರು ಘೋರ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಈ ಅಬಕಾರಿ ದಾಳಿಯಲ್ಲ್ಲಿ ಅಬಕಾರಿ ನಿರೀಕ್ಷಕ ಗೋಪಾಳೆ ಪಂಡಿತ, ಅಬಕಾರಿ ಉಪ ನಿರೀಕ್ಷಕ ಅಶೋಕ ರಾಠೋಡ ಹಾಗೂ ವಾಹನ ಚಾಲಕ ಆನಂದ ಪಾಲ್ಗೊಂಡಿದರು.

ಕಲಬುರಗಿ ವಿಭಾಗದ (ಜಾರಿ ಮತ್ತು ತನಿಖೆ) ಅಬಕಾರಿ ಜಂಟಿ ಆಯುಕ್ತರಾದ ಎಸ್.ಕೆ. ಕುಮಾರ ಇವರ ನಿರ್ದೇಶನ ಹಾಗೂ ಕಲಬುರಗಿ ಅಬಕಾರಿ ಉಪ ಆಯುಕ್ತೆ ಶಶಿಕಲಾ ಎಸ್.ಒಡೆಯರ್ ಇವರ ಆದೇಶದನ್ವಯ ಕಲಬುರಗಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಮಹ್ಮದ್ ಇಸ್ಮಾಯಿಲ್ ಇನಾಮದಾರ್ ಅವರ ನೇತೃತ್ವದಲ್ಲಿ ಅಕ್ರಮವಾಗಿ ಮದ್ಯ ಸಾಗಾಣ ಕೆ ಮಾಡುವವರನ್ನು ಪತ್ತೆ ಹಚ್ಚಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ.

Latest Indian news

Popular Stories

error: Content is protected !!