
Crime
ಕೇರಳ :ಆಟೋ ರಿಕ್ಷಾ ಅಪಘಾತಕ್ಕೀಡಾಗಿ ಬೆಂಕಿ : ಇಬ್ಬರು ಸಜೀವ ದಹನ
ಕೇರಳ :ಸಿಎನ್‌ಜಿ ಆಟೊ ರಿಕ್ಷಾ ಅಪಘಾತಕ್ಕೀಡಾಗಿ ತಕ್ಷಣ ಬೆಂಕಿ ಕಾಣಿಸಿಕೊಂಡ ಪರಿಣಾಮ ಇಬ್ಬರು ಸಜೀವ ದಹನವಾದ ಘಟನೆ ಕೇರಳದ ಕಣ್ಣೂರಿನ ಕದಿರೂರಿನಲ್ಲಿ ನಡೆದಿದೆ.
ಮೃತಪಟ್ಟವರನ್ನು ಚಾಲಕ ಅಭಿಲಾಷ್ (37) ಹಾಗೂ ಆತನ ಸ್ನೇಹಿತ ಸೈಜೇಶ್ ಮೃತಪಟ್ಟವರು.ನಿನ್ನೆ ರಾತ್ರಿ ಸುಮಾರು 8.30ಕ್ಕೆ ಘಟನೆ ಸಂಭವಿಸಿದೆಆಟೊ ರಿಕ್ಷಾ ಹಾಗೂ ಖಾಸಗಿ ಬಸ್ ನಡುವೆ ಅಪಘಾತ ನಡೆದಿದ್ದು, ಬೆಂಕಿ ಹೊತ್ತಿಕೊಳ್ಳುವುದಕ್ಕೂ ಮುನ್ನ ರಿಕ್ಷಾ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.




