ಪಣಜಿ/ಬೆಳಗಾವಿ: 11 ದಿನಗಳ ಪೊಲೀಸ್ ಕಸ್ಟಡಿ ನಂತರ, ಪಣಜಿಯ ಬಾಲಾಪರಾಧಿ ನ್ಯಾಯಾಲಯವು, ತನ್ನ 4 ವರ್ಷದ ಮಗನ ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಬೆಂಗಳೂರು ಮೂಲದ ಎಐ ಸಿಇಒ ಸುಚನಾ ಸೇಠ್‌ಗೆ 13 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಸುಚನಾ ಸೇಠ್ ಜನವರಿ 7 ರಂದು ಗೋವಾದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ತಂಗಿದ್ದ ಸಮಯದಲ್ಲಿ ತನ್ನ 4 ವರ್ಷದ ಮಗುವನ್ನು ಕೈಯಾರೆ ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಸುಚನಾ ಸೇಠ್ ಜನವರಿ 8ರಂದು ಮಗುವನ್ನು ಕೊಂದು ಸೂಟ್ ಕೇಸ್ ನಲ್ಲಿ ತುಂಬಿಸಿ ಗೋವಾದಿಂದ ಬೆಂಗಳೂರಿಗೆ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಕಲಾಂಗುಟೆ ಪೊಲೀಸರು ಶವದೊಂದಿಗೆ ಚಿತ್ರದುರ್ಗದಲ್ಲಿ ಆಕೆಯನ್ನು ಬಂಧಿಸಿ ಅದೇ ದಿನ ಎಫ್‌ಐಆರ್ ದಾಖಲಿಸಿಕೊಂಡಿದ್ದರು.
ಅಂದಿನಿಂದ, ಪಣಜಿಯ ಬಾಲಾಪರಾಧಿ ನ್ಯಾಯಾಲಯದ ವಶದಲ್ಲಿ ಸುಚನಾ ಸೇಠ್ ಇದ್ದರು. ನ್ಯಾಯಾಲಯದ ಆದೇಶದಂತೆ ನಿನ್ನೆ ಸುಚನಾರನ್ನು ವಿಚಾರಣೆಗೆ ಹಾಜರುಪಡಿಸಲಾಯಿತು. ಈ ವೇಳೆ ನ್ಯಾಯಾಲಯ 13 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.