ಮಣಿಪಾಲ: 3 ವರ್ಷದ‌ ಮಗುವಿನೊಂದಿಗೆ ಯುವತಿ ನಾಪತ್ತೆ

ಮಣಿಪಾಲ: ವಿವಾಹಿತ ಮಹಿಳೆ‌ ಮೂರು ವರ್ಷದ ಮಗುವಿನೊಂದಿಗೆ ನಾಪತ್ತೆಯಾಗಿದ್ದಾರೆ.

ಅಂಜುಬಾನು (27) ಮತ್ತು ಆಕೆಯ  3 ವರ್ಷ  ಪ್ರಾಯ ಹೆಣ್ಣು ಮಗು ಮೊಯಿರಾ ಫಿರ್ದೊಸ್‌ ರವರು ತಾವು ವಾಸವಿದ್ದ  ನಗರ  ಶಿವಳ್ಳಿ ಗ್ರಾಮದ ಸಂತೋಷ ನಗರ “ಶಭಾನಾ ಮಂಜಿಲ್‌” ನಿಂದ ದಿನಾಂಕ 18/02/2023 ರಂದು ಬೆಳಿಗ್ಗೆ 07:30 ಗಂಟೆಯಿಂದ 09:00 ಗಂಟೆಯ ಮಧ್ಯಾವಧಿಯಲ್ಲಿ ಮನೆಗೆ ಬೀಗ ಹಾಕಿ ಹೊರಟು ಹೋಗಿದ್ದು ಈ ವೆರೆಗೂ ವಾಪಾಸು ಬಾರದೇ ಕಾಣೆಯಾಗಿರುತ್ತಾರೆ.

ಕಾಣೆಯಾದ ಅಂಜುಬಾನು ರವರು ದಿನಾಂಕ: 20/02/2023, 23/02/2023 ಮತ್ತು 24/02/2023 ರಂದು ಸಹೋದರ ಸಲೀಮ್‌ ರವರಿಗೆ ಪೋನ್‌ ಕರೆ ಮಾಡಿ ನಾನು ಮನೆಗೆ ಬರುವುದಾಗಿ ತಿಳಿಸಿದ್ದು ಆದರೂ ಈವರೆಗೂ ಮನೆಗೆ ಬಂದಿರುವುದಿಲ್ಲ.ಕಾಣೆಯಾದವರ ವಿವರ ಸಾದಾರಣ ಮೈಕಟ್ಟು  ಎತ್ತರ: 5.4 ಅಡಿ ಬಣ್ಣ: ಬಿಳಿ ಮೈ ಬಣ್ಣ ಬಟ್ಟೆ: ಕಪ್ಪು ಬುರ್ಖಾ ಧರಿಸಿರುತ್ತಾರೆ ಭಾಷೆ: ಹಿಂದಿ ಕನ್ನಡ, ಕಾಣೆಯಾದ ಮಗುವಿನ ಚಹರೆ: ಬಿಳಿ ಬಣ್ಣ, ಎತ್ತರ:3 ಅಡಿ, ಬಣ್ಣ: ಬಿಳಿ ಮೈ ಬಣ್ಣ ಭಾಷೆ: ಹಿಂದಿ ಸ್ವಲ್ಪ ಸ್ವಲ್ಪ,ಮಾತಾಡುತ್ತಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಅಪರಾಧ ಕ್ರಮಾಂಕ 36/2023  ಕಲಂ: ಹೆಂಗಸು ಮತ್ತು ಮಗು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories