Crime

ಕಲಬುರಗಿ: ನಗರಕ್ಕೆ ಅ. 15ರಿಂದ 18ರವರಗೆ ನೀರು ವ್ಯತ್ಯಯ

ಕಲಬುರಗಿ.ಅಕ್ಟೋಬರ್.14:-ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಜಲಮೂಲಗಳಾದ ಭೀಮಾ, ಬೆಣ್ಣೆತೋರಾ ನದಿ ಹಾಗೂ ಭೋಸ್ಗಾ ಕೆರೆಯ ಮೇಲ್ಭಾಗದಲ್ಲಿ ಸತತವಾಗಿ ಮಳೆಯಾಗುತ್ತಿರುವ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಾಗಿರುತ್ತದೆ. ಇದರ ಹಿನ್ನೆಲೆಯಲ್ಲಿ ಕಲಬುರಗಿ ನಗರಕ್ಕೆ ಅಕ್ಟೋಬರ್ 15 ರಿಂದ 18ರವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸಬೇಕೆಂದು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ಅದೇ ರೀತಿ ಗಂಡೋರಿ ನಾಲಾದಿಂದ ನೀರು ಬಿಡುಗಡೆಗೊಳಿಸಿರುವುದರಿಂದ ಬೆಣ್ಣೆತೋರಾ ಸ್ಥಾವರದಲ್ಲಿನ ವಿದ್ಯುತ್ ಉಪಕೇಂದ್ರದಲ್ಲಿ ಟ್ರಾನ್ಸ್‍ಫಾರ್ಮರ್, ಕ್ಯುಬಿಕಲ್ ಮೀಟರ್‍ವರೆಗೆ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ಪಂಪ್‍ಸೆಟ್‍ಗಳನ್ನು ನಿಲುಗಡೆಗೊಳಿಸಲಾಗಿದೆ. ಭೋಸಗಾ ಕೆರೆಯ ಮೇಲ್ಭಾಗದಲ್ಲಿ ಅತೀ ಹೆಚ್ಚು ಮಳೆಯಾಗಿರುವುದರಿಂದ ಪ್ರವಾಹ ಉಂಟಾಗಿರುತ್ತದೆ. ಕೆರೆಯ ಸಮೀಪವಿರುವ ನಾಲಾದಲ್ಲಿ ಹಾದು ಹೋಗಿರುವ 750 ಮೀ.ಮೀ. ವ್ಯಾಸದ ಆರ್.ಸಿ.ಸಿ. ಕೊಳವೆ ಮಾರ್ಗದಲ್ಲಿ ಸೋರಿಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಬೇಕಾಗಿರುವುದರಿಂದ ನೀರು ಪೂರೈಕೆಯನ್ನು ನಿಲುಗಡೆಗೊಳಿಸಲಾಗಿದೆ.
ಭೀಮಾ ನದಿಯ ಸರಡಗಿ ಮೂಲ ಸ್ಥಾವರದ ಮೇಲ್ಭಾಗದಲ್ಲಿ ಅತೀ ಹೆಚ್ಚು ಮಳೆಯಾಗಿ ಪ್ರವಾಹ ಬಂದಿರುವುದರಿಂದ 11 ಕೆ.ವಿ. ವಿದ್ಯುತ್ ಲೈನ್‍ನ 33ಕೆ.ವಿ. ವಿ.ಸಿ.ಬಿ.ಯಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವುದರಿಂದ ತುರ್ತು ದುರಸ್ತಿ ಕಾರ್ಯಕೈಗೊಳ್ಳಲಾಗಿದೆ. ಇದರ ಹಿನ್ನೆಲೆಯಲ್ಲಿ ಪಂಪ್‍ಸೆಟ್‍ಗಳನ್ನು ನಿಲುಗಡೆಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button