Crime

ಹಮಾಸ್ ವಿರುದ್ಧ ಹೋರಾಡಲು ಇಸ್ರೇಲ್ 48 ಗಂಟೆಗಳಲ್ಲಿ 3 ಲಕ್ಷ ಸೈನಿಕರ ಸಜ್ಜು

ಜೆರುಸಲೇಂ: ಗಾಜಾದಿಂದ ಹಮಾಸ್ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ದಾಖಲೆಯ 3 ಲಕ್ಷ ಪಡೆಯನ್ನು ಒಗ್ಗೂಡಿಸಿ ಆಕ್ರಮಣ ನಡೆಸಲು ಮುಂದಾಗಿದೆ ಎಂದು ಮುಖ್ಯ ಮಿಲಿಟರಿ ವಕ್ತಾರರು ಹೇಳಿದ್ದಾರೆ.

ಶನಿವಾರದ ಅನಿರೀಕ್ಷಿತ ದಾಳಿಯ ನಂತರ, ಇಸ್ರೇಲಿ ವಿಮಾನಗಳು ಗಾಜಾ ಮೇಲೆ ಗುರಿಯಾಗಿಟ್ಟು ದಾಳಿ ನಡೆಸುತ್ತಿದೆ. ಆದರೆ ಇಸ್ರೇಲ್ ಸೇನೆ ಪ್ಯಾಲೆಸ್ತೀನ್ ಬಂದೂಕುಧಾರಿಗಳಿಂದ ಆಕ್ರಮಿಸಿಕೊಂಡಿರುವ ಗಡಿ ಗ್ರಾಮಗಳು ಮತ್ತು ಪಟ್ಟಣಗಳ ನಿಯಂತ್ರಣ ಹಿಂಪಡೆಯಲು ಹೋರಾಡುತ್ತಿವೆ.

ಮುಖ್ಯ ಮಿಲಿಟರಿ ವಕ್ತಾರ ರಿಯರ್-ಅಡ್ಮಿರಲ್ ಡೇನಿಯಲ್ ಹಗರಿ ಅವರು ಆ ಸಮುದಾಯಗಳ ನಿಯಂತ್ರಣವನ್ನು ಮರುಸ್ಥಾಪಿಸಲಾಗಿದೆ ಆದರೆ ಕೆಲವು ಬಂದೂಕುಧಾರಿಗಳು ಸಕ್ರಿಯವಾಗಿದ್ದರಿಂದ ಪ್ರತ್ಯೇಕ ಘರ್ಷಣೆಗಳು ಮುಂದುವರೆದವು. ನಾವು ಈಗ ಎಲ್ಲಾ ಸಮುದಾಯಗಳಲ್ಲಿ ಹುಡುಕಾಟ ನಡೆಸುತ್ತಿದ್ದೇವೆ, ಪ್ರದೇಶವನ್ನು ತೆರವುಗೊಳಿಸುತ್ತಿದ್ದೇವೆ ಎಂದು ಹೇಳಿದರು.

ಗಾಜಾದಲ್ಲಿ ಪ್ರತಿದಾಳಿಯಿಂದ ಗಡಿಯ ಇಸ್ರೇಲ್‌ನ ಭಾಗವನ್ನು ಭದ್ರಪಡಿಸುವುದು ಮುಖ್ಯವಾಗಿದೆ. ಶನಿವಾರದಿಂದ 300,000 ಮಿಲಿಟರಿ ಪಡೆಗಳನ್ನು ಕರೆಸಲಾಗಿದೆ ಎಂದು ಹಗರಿ ಹೇಳಿದರು.

ಭದ್ರತಾ ಪಡೆಗಳ 73 ಸದಸ್ಯರು ಸೇರಿದಂತೆ ಇಸ್ರೇಲ್‌ನ ಗಡಿ ಭಾಗದಲ್ಲಿ 700 ಜನರು ಮೃತಪಟ್ಟಿದ್ದಾರೆ. ಇಸ್ರೇಲ್‌ನ ಸೇನೆಯು ನೂರಾರು ಪ್ಯಾಲೆಸ್ತೀನ್ ಬಂದೂಕುಧಾರಿಗಳನ್ನು ಕೊಂದಿದೆ ಎಂದು ಅವರು ಹೇಳಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button