
Crime
ಟೈರ್ ಬ್ಲಾಸ್ಟ್… ನೋಡ ನೋಡುತ್ತಿದ್ದಂತೆ ನಡು ರಸ್ತೆಯಲ್ಲಿಯೇ ಹೊತ್ತಿ ಉರಿದ ಓಮ್ನಿ ವ್ಯಾನ್; ಓರ್ವನಿಗೆ ಗಂಭೀರ ಗಾಯ
ಕಲಬುರ್ಗಿ: ಚಲಿಸುತ್ತಿದ್ದ ಓಮ್ನಿ ವ್ಯಾನ್ ನ ಟೈರ್ ಬ್ಲಾಸ್ಟ್ ಆಗಿ ರಸ್ತೆಯಲ್ಲಿ ಪಲ್ಟಿಯಾಗಿ ಬಿದ್ದಿದ್ದು, ನೋಡ ನೋಡುತ್ತಿದ್ದಂತೆ ಬೆಂಕಿ ಹೊತ್ತಿ ಉರಿದ ಘಟನೆ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಬಳಿ ನಡೆದಿದೆ.
ಯಾದಗಿರಿಯಿಂದ ಕಲಬುರ್ಗಿಗೆ ಬರುತ್ತಿದ್ದ ವೇಳೆ ಈ ದುರಂತ ಸಂಭವಿಸಿದ್ದು ಏಕಾಏಕಿ ಓಮ್ನಿ ವ್ಯಾನ್ ಟೈರ್ ಬ್ಲಾಸ್ಟ್ ಆಗಿದೆ.
ವ್ಯಾನ್ ಪಲ್ಟಿಯಾಗಿ ಬಿದ್ದ ತಕ್ಷಣ ವ್ಯಾನ್ ಗೆ ಬೆಂಕಿ ಹೊತ್ತಿಕೊಂಡು ಉರಿದಿದೆ. ಈ ಘಟನೆಯಲ್ಲಿ ವ್ಯಾನ್ ನಲ್ಲಿದ್ದ ಓರ್ವನಿಗೆ ಗಂಭೀರವಾದ ಗಾಯಗಳಾಗಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.




