
ತಾಲಿಬಾನ್ ಹಿಡಿತದಿಂದ ತಪ್ಪಿಸಲು ಅಫಘಾನ್ ನಾಯಕರು ದೇಶಕ್ಕಾಗಿ ಹೋರಾಡಬೇಕು – ಜೋಯ್ ಬಿಡೆನ್
ಅಫಘಾನ್: ತಾಲಿಬಾನ್ ಅಫಘಾನಿಸ್ತಾನದ 65% ಭಾಗವನ್ನು ಇದೀಗ ನಿಯಂತ್ರಣದಲ್ಲಿ ತೆಗೆದುಕೊಂಡಿದ್ದು ಈ ಸಂದರ್ಭದಲ್ಲಿ ಅಫಘಾನ್ ನಾಯಕರು ತಮ್ಮ ದೇಶದ ಉಳಿವಿಗಾಗಿ ಪ್ರಬಲವಾಗಿ ಹೋರಾಡಬೇಕೆಂದು ಅಮೇರಿಕಾದ ಅಧ್ಯಕ್ಷ ಜೊಯ್ ಬಿಡೆನ್ ಕರೆ ನೀಡಿದ್ದಾರೆ.
ಮಂಗಳವಾರ ಪುಲೆ ಕುಮ್ರಿ ಪ್ರಾಂತ್ಯವನ್ನು ತಾಲಿಬಾನ್ ತನ್ನ ಕೈವಶ ಮಾಡಿಕೊಂಡಿತ್ತು. ಇದರೊಂದಿಗೆ ತಾಲಿಬಾನ್ ಕೈಗೆ ಅಫಘಾನ್ ನ ಏಳನೇ ಅತೀ ದೊಡ್ಡ ಪ್ರದೇಶ ಕೈವಶವಾಗಿದಂತಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಡೆನ್, ಅಫಘಾನ್ ನಾಯಕರು ಜೊತೆಗೂಡಿ ತಾಲಿ ಬಾನಿಗಳನ್ನು ಎದುರಿಸಬೇಕು. ದೇಶಕ್ಕಾಗಿ ಸಂಘಟಿತ ಹೋರಾಟ ನಡೆಸಬೇಕೆಂದು ಕರೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಫಘಾನ್ ಸೇನೆಯು ಕೂಡ ತಾಲಿಬಾನ್ ಗಳನ್ನು ಹಿಮ್ಮೆಟ್ಟಿಸಲು ಪ್ರಯತ್ನ ನಡೆಸಬೇಕೆಂದು ಹೇಳಿದ್ದಾರೆ. ಅಮೇರಿಕಾ ಸೇನೆಯನ್ನು ಹಿಂಪಡೆದ ಕ್ರಮ ಸರಿಯಿದೆ. ಕಳೆದ ಇಪ್ಪತ್ತು ವರ್ಷದಲ್ಲಿ ಒಂದು ಟ್ರಿಲಿಯನ್ ಡಾಲರ್ ವ್ಯಯಿಸಲಾಗಿದೆ. ಸಾವಿರಾರು ಸೈನಿಕರು ಜೀವ ಕಳೆದುಕೊಂಡಿದ್ದಾರೆ. ಈಗ ನಾವು ಅಫಘಾನ್ ಸೈನ್ಯಕ್ಕೆ ಸಂಬಳ, ಆಹಾರ, ಶಸ್ತ್ರ ಮತ್ತು ಸಹಾಯ ಒದಗಿಸುತ್ತೇವೆಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಅಫಘಾನ್ ನಾಯಕರು ಇದೀಗ ಜೀವ ಭಯದೊಂದಿಗೆ ಇದ್ದು ಕಾಬೂಲಿನಲ್ಲಿ ಬದುಕುವುದೇ ದುಸ್ತರವಾಗಿದೆಯೆಂದು ಟ್ಯಾಕ್ಸ್ ಅಧಿಕಾರಿ ಅಬ್ಬಾಸ್ ಮಾಧ್ಯಮಗಳಿಗೆ ತಿಳಿಸುತ್ತಾರೆ.




