ಕೈಗಾ ಎಂಜಿನಿಯರ್ ಸಾಯಿ ಪ್ರಶಾಂತ ನಾಪತ್ತೆ :ಜೂ.5 ರಂದೇ ಕಣ್ಮರೆ

ಕಾರವಾರ : ಕೈಗಾ ಅಣು ಸ್ಥಾವರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂಜಿನಿಯರ್ ಸಾಯಿ ಪ್ರಶಾಂತ್ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸಾಯಿ ಪ್ರಶಾಂತ 27 ವರ್ಷದವರು. ಆಂದ್ರಪ್ರದೇಶ ಮೂಲದವರು. ಕೈಗಾ ಅಣುಸ್ಥಾವರ ಸೈಟ್ ನಲ್ಲಿ
ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು‌ . ಕೈಗಾ ಸನಿಹದ ಮಲ್ಲಾಪುರ ಗ್ರಾಮ ಚರ್ಚವಾಡದಲ್ಲಿ ವಾಸಿಸುತ್ತಿದ್ದರು.

ಸಾಯಿ ಪ್ರಶಾಂತ ಇದೇ ಜೂನ್ 05 ರಂದು ಸಂಜೆ ಯಾರಿಗೂ ಹೇಳದೆ ಕೇಳದೇ ಕಾಣೆಯಾಗಿದ್ದಾರೆಂದು ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅವರು ಮನೆಗೆ ಬಾರದೆ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾನೆ ಎಂದು ದೂರಲ್ಲಿ ವಿವರಿಸಲಾಗಿದೆ.

ಕಾಣೆಯಾದ ಎಂಜಿನಿಯರ್ ಉದ್ದನೆಯ ಮುಖ, ಗೋಧಿ ಮೈ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. 5.4 ಅಡಿ ಎತ್ತರ ಇದ್ದಾರೆ. ತೆಲಗು, ಇಂಗ್ಲೀಷ್ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ. ನೀಲಿ ಬಣ್ಣದ ಟಿ ಶರ್ಟ್, ತಲೆಗೆ ಕ್ಯಾಪ್ ಧರಿಸಿರುತ್ತಾನೆ. ಇವರು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಮಲ್ಲಾಪುರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08382-254812, ಪಿಎಸ್‌ಐ ಮಲ್ಲಾಪುರ ಮೊ.ಸಂ: 9480805249, ಕದ್ರಾ ಪೊಲೀಸ್ ವೃತ್ತ ನಿರೀಕ್ಷಕರ ದೂ.ಸಂ: 08382-256200, 9480805231, ಉತ್ತರ ಕನ್ನಡ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ ದೂ.ಸಂ: 08382-226306, 226307 ನ್ನು ಸಂಪರ್ಕಿಸುವಂತೆ ಮಲ್ಲಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೈಗಾ ಅಣುಸ್ಥಾವರ ಅಧಿಕಾರಿಗಳು ಈ‌ ಸಂಬಂಧ ಎಲ್ಲೂ ಮಾಹಿತಿ ಹಂಚಿಕೊಂಡಿಲ್ಲ.
……

Latest Indian news

Popular Stories