ಬೀದರ್ : ಗಡಿ ಜಿಲ್ಲೆ ಬೀದರ್‌ನಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕನ್ನಡ ಭವನವನ್ನು ಇಂದು ಜಿಲ್ಲಾ ಉಸ್ತವಾರಿ ಸಚಿವ ಈಶ್ವರ ಅವರು ರಿಬ್ಬನ್ ಕಟ್ ಮಾಡುವುದರ ಮುಖಾಂತರ ಉದ್ಘಾಟನೆಯನ್ನು ಮಾಡಿದರು.
ನಗರದ ಚಿಕ್ಕಪೇಟೆ ನಲ್ಲಿ ನಿರ್ಮಾಣವಾಗಿರುವ ನೂತನ ಕನ್ನಡ ಸಾಹಿತ್ಯ ಭವನದ ಉದ್ಘಾಟನೆಯ ಕಾರ್ಯಕ್ರಮದಲ್ಲಿ
ಹಲವು ಕನ್ನಡ ಪರ ಹೋರಾಟಗಾರರು,ಕಲಾವಿದರು ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕಿದರು.ಇದೇ ವೇಳೆ ಮಾತಾನಾಡಿದ ಉಸ್ತವಾರಿ ಸಚಿವ ಈಶ್ವರ ಖಂಡ್ರೆಯವರು ನಮ್ಮ ಭಾಗದ ಹಲವು ಕನ್ನಡಾಭಿಮಾನಿಗಳ ಅಸೆಯಂತೆ ಇಂದು ಹಲವು ದಿನಗಳಿಂದ ನೆನೆಗುದ್ದಿಗೆ ಬಿದ್ದಿದ್ದ ಕನ್ನಡ ಸಾಹಿತ್ಯ ಭವನ ಇಂದು ಉದ್ಘಾಟನೆಗೊಂಡಿದ್ದು ಬಹಳ ಸಂತೋಷವಾಗಿದೆ ಎಂದರು.
ನಂತರ ಮಾತಾನಾಡಿದ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೆಟ್ಟಿಯವರು ಕಳೆದ 2 ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಕಸಾಪ ದ ಎಲ್ಲ ಅಜೀವ ಸದಸ್ಯರ ಅಶಿರ್ವಾದದಿಂದ 2ನೇಯ ಬಾರಿ ಗೆಲುವನ್ನು ಸಾಧಿಸಿದೆ .ಆ ಸಮಯದಲ್ಲಿ ನಾನು ನೀಡಿದ ಮಾತಿನಂತೆ 2 ವರ್ಷದೊಳಗೆ ಕನ್ನಡ ಸಾಹಿತ್ಯ ಭವನದ ಉದ್ಘಾಟನೆಯನ್ನು ಮಾಡಿದ್ದೆನೆ ಎಂದರು.
ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಮಹೇಶ ಜೋಶಿ, ಪೌರಾಡಳಿತ ಸಚಿವ ರಹೀಂ ಖಾನ್,
ಭಾಲ್ಕಿ ಸಂಸ್ಥಾನ ಮಠದ ಬಸವಲಿಂಗ ಪಟ್ಟದ್ದೇವರು, ಎಮ್ಎಲ್‌ಸಿ ರಘುನಾಥ್‌ರಾವ್ ಮಲ್ಕಾಪುರೆ,
ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.