ಕಾಸರಗೋಡು: ರಿಯಾಝ್ ಮೌಲವಿ ಕೊಲೆ ಪ್ರಕರಣ: ಮೂವರು ಆರೋಪಿಗಳು ಖುಲಾಸೆ

ಕಾಸರಗೋಡು: 2017ರಲ್ಲಿ ಕಾಸರಗೋಡಿನಲ್ಲಿ ನಡೆದ ರಿಯಾಝ್ ಮೌಲವಿ ಕೊಲೆ ಪ್ರಕರಣದಲ್ಲಿ ಎಲ್ಲ‌ ಮೂವರು ಆರೋಪಿಗಳನ್ನು ನಿರ್ದೋಷಿಗಳೆಂದು ಕಾಸರಗೋಡು ಜಿಲ್ಲಾ ಪ್ರಧಾನ ಸತ್ರ‌ ನ್ಯಾಯಾಲಯ ಆದೇಶಿಸಿದೆ.
ಈ ಕುರಿತು ಶನಿವಾರ ತೀರ್ಪು ನೀಡಿದ ನ್ಯಾಯಾಧೀಶರಾದ ಕೆ.ಕೆ. ಬಾಲಕೃಷ್ಣನ್ ಆರೋಪಿಗಳನ್ನು ನಿರ್ದೋಶಿ ಎಂದು ತೀರ್ಪು ನೀಡಿದ್ದಾರೆ.

ಆರ್‌ಎಸ್‌ಎಸ್ ಕಾರ್ಯಕರ್ತರಾದ ಅಜೇಶ್, ನಿತಿನ್ ಕುಮಾರ್, ಅಖಿಲ್ ಎಂಬ ಮೂವರನ್ನು ಈ ಕೊಲೆ ಆರೋಪದಲ್ಲಿ ಬಂಧಿಸಲಾಗಿತ್ತು.
ಕಾಸರಗೋಡಿನ ಚೂರಿ ಎಂಬಲ್ಲಿ ಮಸೀದಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೊಡಗಿನ ರಿಯಾಝ್ ಮೌಲವಿಯನ್ನು 2017 ಮಾರ್ಚ್ 20ರಂದು ದುಷ್ಕರ್ಮಿಗಳ ತಂಡ ಕೊಲೆ ನಡೆಸಿತ್ತು. ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸುವ ಹುನ್ನಾರದಿಂದ ಈ ಕೊಲೆ ನಡೆದಿತ್ತು ಎಂದು ಹೇಳಲಾಗಿದೆ.

ತೀರ್ಪಿನ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ
ಈ ರೀತಿಯ ತೀರ್ಪು ನಿರೀಕ್ಷಿಸಿರಲಿಲ್ಲ. ಈ ತೀರ್ಪಿನಿಂದ ನೋವು ಮತ್ತು ನಿರಾಸೆಯಾಗಿದೆ ಎಂದು ಪಬ್ಲಿಕ್ ಪ್ರಾಸಿಕೂಟರ್ ಶುಕೂರ್ ಹೇಳಿದ್ದಾರೆ.

Latest Indian news

Popular Stories