ಕಾಂಗ್ರೆಸ್​ ಸೇರ್ಪಡೆಯಾದ ಡಾ ತೇಜಸ್ವಿನಿ ಗೌಡ

ಬೆಂಗಳೂರು: ಇತ್ತೀಚೆಗಷ್ಟೇ ಎಂಎಲ್​​ಸಿ ಸ್ಥಾನಕ್ಕೆ (BJP MLC) ರಾಜೀನಾಮೆ ನೀಡಿದ್ದ ಡಾ ತೇಜಸ್ವಿನಿ ಗೌಡ ಅವರು ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ (Congress Party) ಮರು ಸೇರ್ಪಡೆಯಾಗಿದ್ದಾರೆ. ದೆಹಲಿಯಲ್ಲಿ (Delhi) ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ತೇಜಸ್ವಿನಿ ಗೌಡ (Tejaswini Gowda) ಅವರನ್ನು ಜೈ ರಾಮ್ ರಮೇಶ್ ಅವರು ಕಾಂಗ್ರೆಸ್​​ಗೆ ಸ್ವಾಗತ ಮಾಡಿದರು.

ಸುಮಾರು ಹತ್ತು ವರ್ಷಗಳ ಹಿಂದೆ ಕಾಂಗ್ರೆಸ್‌ನಿಂದ ಬಿಜೆಪಿಗೆ ವಲಸೆ ಬಂದಿದ್ದ ತೇಜಸ್ವಿನಿ ಅವರು ಈಗ ಮತ್ತೆ ಕಾಂಗ್ರೆಸ್‌ಗೆ ವಾಪಸ್ಸಾಗಿದ್ದಾರೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿನಿ ಮೈಸೂರು ಅಥವಾ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು. ಟಿಕೆಟ್ ಸಿಗದೇ ಇದ್ದುದರಿಂದ ಬೇಸರಗೊಂಡು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಘರ್‌ವಾಪ್ಸಿ ಆಗಿದ್ದಾರೆ ಎನ್ನಲಾಗುತ್ತಿದೆ

Latest Indian news

Popular Stories