ಪುತ್ತೂರು: ಪೊಲೀಸ್ ಠಾಣೆಯ ಸಮೀಪ ಯುವತಿಗೆ ಚೂರಿ ಇರಿತ – ಮೃತ್ಯು

ಪುತ್ತೂರು, ಆ.24: ಇಲ್ಲಿನ ಮಹಿಳಾ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಯುವಕನೊಬ್ಬ ಯುವತಿಯೊಬ್ಬಳನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ಗುರುವಾರ ಆ.24ರಂದು ನಡೆದಿದೆ.

ಬಂಟ್ವಾಳದ ಅಳಿಕೆ ನಿವಾಸಿ ಗೌರಿ (18) ಕೊಲೆಗೀಡಾದ ಯುವತಿ.

ಆರೋಪಿ ಯುವಕ ಪದ್ಮರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Latest Indian news

Popular Stories