ಪೊನ್ನಂಪೇಟೆ ತಾಲೂಕಿನ ಚಿಕ್ಕಮುಂಡೂರು ಗ್ರಾಮದ ಅಜ್ಜಿಕುಟ್ಟೀರ ಭೀಮಯ್ಯ (67) ಸಾವನ್ನಪ್ಪಿದ ದುರ್ದೈವಿ
ಬುಧವಾರ ಬೆಳಿಗ್ಗೆ 8.30ರ ಸಮಯದಲ್ಲಿ ಗದ್ದೆಯಲ್ಲಿ ದನ ಕಟ್ಟಿ ಕೈ ತೊಳೆಯಲೆಂದು ಕೆರೆಗೆ ಹೋದ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವಪ್ಪಿದ್ದಾರೆ.
ಮೃತ ದೇಹದ ಮರಣೋತ್ತರ ಪರೀಕ್ಷೆಗೆ ಗೋಣಿಕೊಪ್ಪಲು ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದ್ದು ಶ್ರೀಮಂಗಳ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..