ಕೋಟ: ಷರತ್ತು ಮೀರಿ ಕಾರ್ಯಕ್ರಮವೊಂದರಲ್ಲಿ ಧ್ವನಿ ವರ್ಧಕ ಬಳಸಿದ ಕಾರಣಕ್ಕೆ ಪ್ರಕರಣ ದಾಖಲಾಗಿದೆ.
ಗಿಳಿಯಾರು ಗ್ರಾಮದ ಮೂಡುಗಿಳಿಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಲ್ಸೆಕೆರೆ ಇದರ ವಠಾರದಲ್ಲಿ ಜನ ಸೇವಾ ಟ್ರಸ್ಟ್ (ರಿ) ಮೂಡುಗಿಳಿಯಾರು ಇವರ ವತಿಯಿಂದ ಅಭಿಮತ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಯೋಜಕರು ಠಾಣೆಗೆ ಬಂದು ಕಾರ್ಯಕ್ರಮ ನಡೆಸುವ ಬಗ್ಗೆ ಹಾಗೂ ಧ್ವನಿವರ್ಧಕವನ್ನು ಬಳಸಲು ಅನುಮತಿ ಕೋರಿದ ಮೇರೆಗೆ ಅವರಿಗೆ ಷರತ್ತು ಬದ್ಧವಾದ ಸೂಚನೆಗಳೊಂದಿಗೆ ಬೆಳಿಗ್ಗೆ 06:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಧ್ವನಿವರ್ಧಕವನ್ನು ಬಳಸಲು ಅನುಮತಿ ನೀಡಲಾಗಿತ್ತು.
ಫೆ. 10 ರಂದು ಸಂಜೆ 6:00 ಗಂಟೆಗೆ ಅಭಿಮತ ಕಾರ್ಯಕ್ರಮವನ್ನು ಮೂಡುಗಿಳಿಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಲ್ಸೆಕೆರೆಯಲ್ಲಿ ಪ್ರಾರಂಭಿಸಿದ್ದು, ಸದ್ರಿ ಕಾರ್ಯಕ್ರಮ ಹಾಗೂ ಧ್ವನಿವರ್ಧಕವನ್ನು ನಿಯಮದಂತೆ ರಾತ್ರಿ 10:00 ಗಂಟೆಯವರೆಗೆ ಉಪಯೋಗಿಸದೆ ದಿನಾಂಕ 11/02/2024 ರ ಬೆಳಗ್ಗಿನ ಜಾವ 01:00 ಗಂಟೆಯವರೆಗೆ ಧ್ವನಿವರ್ಧಕವನ್ನು ಉಪಯೋಗಿಸಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಉಪಯೋಗಿಸಿ ಧ್ವನಿವರ್ಧಕ ಸೂಚನೆಯನ್ನು ಉಲ್ಲಂಘನೆ ಮಾಡಿದ ಕುರಿತು ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 34/2024 ಕಲಂ: 109 ಕೆಪಿ ಕಾಯಿದೆಯಂತೆ ಪ್ರಕರಣ ದಾಖಲಾಗಿದೆ.