Crime

ಕೋವಿಡ್ ಹೆಚ್ಚಳ: ವಿಮಾನ ಹಾರಾಟ ರದ್ದುಗೊಳಿಸಿದ ಸೌದಿ

ದುಬೈ,ಫೆ.3:- ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತ ಮತ್ತು ಅಮೆರಿಕ ಸೇರಿದಂತೆ 20 ರಾಷ್ಟ್ರಗಳ ವಿಮಾನ ಹಾರಾಟವನ್ನು ಸೌದಿ ಅರೇಬಿಯಾ ರದ್ದುಗೊಳಿಸಿದೆ.
ವರದಿಪ್ರಕಾರ, ಸೌದಿ ಅರೇಬಿಯಾದಲ್ಲಿ ಕರೋನವೈರಸ್ ಪ್ರಕರಣಗಳು ಹೊಸ ಪ್ರಮಾಣದಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬುಧವಾರದಿಂದ 20 ರಾಷ್ಟ್ರಗಳ ಅಂತಾರಾಷ್ಟ್ರೀಯ ವಿಮಾನಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯ ಪ್ರಕಟಿಸಿದೆ.
ಭಾರತವಲ್ಲದೆ, ಪಾಕಿಸ್ತಾನ, ಯುನೈಟೆಡ್ ಸ್ಟೇಟ್ಸ್, ಬ್ರೆಜಿಲ್, ಜಪಾನ್ ಮತ್ತು ಇತರ ಅನೇಕ ರಾಷ್ಟ್ರಗಳಿಗೆ ವಿಮಾನಗಳ ತಾತ್ಕಾಲಿಕ ಸ್ಥಗಿತವು ಅನ್ವಯಿಸುತ್ತದೆ. ಬ್ರಿಟನ್, ಇಟಲಿ, ಪೆÇೀರ್ಚುಗಲ್, ಫ್ರಾನ್ಸ್, ಸ್ವೀಡನ್, ಜರ್ಮನಿ, ಐಲೆರ್ಂಡ್ ಮತ್ತು ಸ್ವಿಜಲೆರ್ಂಡ್ ಸಹ ಈ ಪಟ್ಟಿಯಲ್ಲಿವೆ.
ರಾಜತಾಂತ್ರಿಕರು, ಸೌದಿ ನಾಗರಿಕರು, ವೈದ್ಯಕೀಯ ಸಿಬ್ಬಂದಿಗಳು ಮತ್ತು ಅವರ ಕುಟುಂಬಗಳಿಗಾಗಿ ವಿನಾಯಿತಿ ನೀಡಲಾಗುವುದು ಎಂದು ಸೌದಿಯ ರಾಜ್ಯ ಸುದ್ದಿ ಸಂಸ್ಥೆ ತಿಳಿಸಿದೆ.
ಸೌದಿ ಅರೇಬಿಯಾದಲ್ಲಿ ಇದುವರೆಗೆ 3,68,000 ಕೋವಿಡ್ ಪ್ರಕರಣಗಳು ಮತ್ತು 6,400 ಸಾವುಗಳು ವರದಿಯಾಗಿವೆ. ದೈನಿಕ ಕೋವಿಡ್-19 ಪ್ರಕರಣಗಳು ಜೂನ್ ನಲ್ಲಿ 5,000ದಿಂದ ಜನವರಿಯಲ್ಲಿ 100ಕ್ಕೆ ಇಳಿದಿದ್ದರೆ, ಮಂಗಳವಾರ 300ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button