CrimeDakshina Kannada

ಮಂಗಳೂರು | ಚಿಲ್ಲರೆ ಇಲ್ಲ ಎಂದು ವೃದ್ಧನನ್ನು ಕೆಳಗಿಳಿಸಿದ KSRTC ನಿರ್ವಾಹಕ

ಮಂಗಳೂರು: ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ಸುಮಾರು 75 ವರ್ಷದ ವೃದ್ಧರೋರ್ವರನ್ನು KSRTC ನಿರ್ವಾಹಕನೋರ್ವ ಅರ್ಧದಲ್ಲೇ ಇಳಿಸಿದ ಘಟನೆ ಕಡಬದಲ್ಲಿ ನಡೆದಿದೆ.

ಕಡಬ ತಾಲ್ಲೂಕು ಕಲ್ಲುಗುಡ್ಡೆ ಶಾಂತಿಗುರಿ ನಿವಾಸಿ ಸುಮಾರು 75 ವರ್ಷ ಪ್ರಾಯದ  ಬಾಬು ಗೌಡರು ಎಂಬವರು ಶನಿವಾರ ಕಾರ್ಯಕ್ರಮವೊಂದಕ್ಕೆ ತೆರಳಲು ಕಲ್ಲುಗುಡ್ಡೆಯಿಂದ KSRTC ಬಸ್ ಹತ್ತಿದ್ದರು. ಬಸ್‌ನಲ್ಲಿ ನಿರ್ವಾಹಕನಿಗೆ 200 ನೋಟು ಕೊಟ್ಟು ಕಾಂಚನ ಎಂಬಲ್ಲಿಗೆ ಟಿಕೆಟ್ ಕೇಳಿದ್ದರು. ಈ ಸಂದರ್ಭದಲ್ಲಿ ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ನಿರ್ವಾಹಕ  ಹಿರಿಯ ನಾಗರಿಕರಾದ ಬಾಬು ಗೌಡ ಅವರನ್ನು ಕಲ್ಲುಗುಡ್ಡೆ ಯಿಂದ ಎರಡು ಕಿ. ಮೀ ದೂರದಲ್ಲಿ ಗೋಳಿಯಡ್ಕ  ಎಂಬಲ್ಲಿ ಬಲವಂತವಾಗಿ ಇಳಿಸಿದ್ದಾನೆಂದು ಬಾಬು ಗೌಡ ಆರೋಪಿಸಿದ್ದಾರೆ.

ನಿರ್ವಹಕನ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಾಕ ಆಕ್ರೋಶ ವ್ಯಕ್ತವಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button