ಕುಂದಾಪುರ: ರಾಜಕೀಯ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆ – ಪ್ರಕರಣ ದಾಖಲು

ಕುಂದಾಪುರ: ಮತಗಟ್ಟೆ ಸಂಖ್ಯೆ 206 1 ರಲ್ಲಿ ಸಂತೋಷ ಎಂಬಾತನು ಚಂದ್ರ ಎಂಬಾತನೊಂದಿಗೆ ಸೇರಿಕೊಂಡು ಪಕ್ಷವೊಂದರ ಪರ ಮತ ಪ್ರಚಾರ ಮಾಡುತ್ತಿರುವ ಬಗ್ಗೆ ಮತ ಗಟ್ಟೆ ಸಿಬ್ಬಂದಿಗಳಿಗೆ ರಾಜಕೀಯ ಪಕ್ಷವೊಂದರ ಕಾರ್ಯಕರ್ತರಾದ ಮಂಜುನಾಥ ಎಂಬುವವರು ದೂರು ನೀಡಿದ್ದರು.

ಮತಗಟ್ಟೆಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳು ಆರೋಪಿಯನ್ನು ಹೊರಗಡೆ ಕಳುಹಿಸಿದ್ದಾರೆ.

ಆ ಸಮಯ ಆರೋಪಿಯು ದೂರುದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಚುನಾವಣೆ ಮುಗಿದ ನಂತರ ನಿನ್ನನ್ನು ಮುಗಿಸಿ ಬಿಡುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿರುತ್ತಾನೆ ಎಂದು ಆರೋಪಿಸಿದ್ದಾರೆ. ತದನಂತರ 1:25 ಗಂಟೆ ಸುಮಾರಿಗೆ ನೇರಳಕಟ್ಟೆ ಸರ್ಕಲ್‌ನಲ್ಲಿ ಉಟ ಮುಗಿಸಿ ಆಟೋ ರಿಕ್ಷಾದಲ್ಲಿ ಹೋಗುತ್ತಿರುವಾಗ 1 ನೇ ಆರೋಪಿ ಸಂತೋಷ, 2. ಮಂಜುನಾಥ, 3. ಗಿರೀಶ, 4. ಗಣೇಶ, 5. ಪ್ರದೀಪ , 6. ಪ್ರಶಾಂತ, 7. ಭರತ್‌ ಇವರು ಸೇರಿಕೊಂಡು ಬಂದು ದೂರುದಾರರು ಹೋಗುತ್ತಿದ್ದ ಆಟೋ ರಿಕ್ಷಾವನ್ನು ಅಡ್ಡಗಟ್ಟಿ ರಿಕ್ಷಾದಿಂದ ಎಳೆದು ಹಾಕಲು ಪ್ರಯತ್ನಿಸಿದಾಗ ತಪ್ಪಿಸಿಕೊಂಡು ತಮ್ಮ ಪಕ್ಷದ ಬೂತ್‌ಗೆ ಹೋದಾಗ ಎಲ್ಲಾ ಆರೋಪಿಗಳು ಕೂಡ ಅಲ್ಲಿಗೆ ಹೋಗಿ ದೂರುದಾರರಿಗೆ ಹಾಗೂ ಜೊತೆಗಿದ್ದ ಸ್ನೇಹಿತ ಫಜಲ್‌ ರವರಿಗೂ ಹಲ್ಲೆಗೆ ಪ್ರಯತ್ನಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.

ಸ್ನೇಹಿತ ಫಜಲ್‌ನಿಗೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 37/2024 ಕಲಂ: 143, 147, 341, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories