
ಮಡಿಕೇರಿಯ ಐಡಿಬಿಐ ಬ್ಯಾಂಕ್ ಬಳಿ ಒಂಟಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ಮಾಂಗಲ್ಯ ಸರವನ್ನು ಅಪಹರಿಸಲು ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಪೊಲೀಸ್ ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.
ಈತ ಮಡಿಕೇರಿ ಸಮೀಪದ ರೆಸಾರ್ಟ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು ಉತ್ತರ ಭಾರತದ. ರಾಜಸ್ಥಾನ ಮೂಲದ ಆರೋಪಿ ವಿಕಾಸ್ ಚೋರ್ಡಿಯಾ 33 ವರ್ಷ ಎಂದು ಹೇಳಲಾಗಿದೆ. ನಿನ್ನೆ ಪೊಲೀಸರು ವಿವಿಧ ಕಡೆ ಸಿ ಸಿ ಟಿ ವಿ ಪರಿಶೀಲಿಸಲಾಗಿ ಹುಡುಗನೊಬ್ಬ ಅವರ ಮನೆಯ ಅಂಗಳಕ್ಕಾಗಿ ತೆರಳುವ ದೃಶ್ಯ ಗೋಚರಿಸಿದ ಹಿನ್ನೆಲೆಯಲ್ಲಿ ತೀವ್ರ ಗತಿಯಲ್ಲಿ ತನಿಖೆ ಕೈಗೊಂಡ ಪೊಲೀಸರು ಇದೀಗ ಆತನನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.ಪೋಲಿಸರ
ಮಿಂಚಿನ ಕಾರ್ಯಕ್ಕೆ ಮಡಿಕೇರಿ ನಗದ ಜನತೆಯಿಂದ ಮೆಚ್ಚುಗೆ




