
Bidar
ಬೀದರ್ನಲ್ಲಿ ಲಘು ಭೂಕಂಪನ.
ಬೀದರ್ : ಇಂದು ಬೆಳಗಿನ ಜಾವ ಎರಡು ಬಾರಿ ಲಘು ಭೂಕಂಪನದ ಅನುಭವವಾಗಿ ಗ್ರಾಮಸ್ಥರು ಆತಂಕಗೊಂಡ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ವಡ್ಡನಕೇರಾ ಗ್ರಾಮದಲ್ಲಿ ನಡೆದಿದೆ. ಮದರಗಾಂವ್ ಗ್ರಾಮ ಪಂಚಾಯತಿ ವ್ಯಾಪ್ತಿ ವಡ್ಡನಕೇರಾ ಗ್ರಾಮದಲ್ಲಿ ಬೆಳಗಿನ ಜಾವ 4 ಮತ್ತು 6 ಗಂಟೆಗೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 2.1 ಹಾಗೂ 1.9 ಭೂ ಕಂಪನದ ತೀವ್ರತೆ ದಾಖಲಾಗಿದ್ದು ಲಘು ಭೂಕಂಪನವಾಗುತ್ತಿದ್ದಂತ್ತೆ ಸ್ವಲ್ಪ ಮಟ್ಟಿಗೆ ಗ್ರಾಮಸ್ಥರು ಭಯಗೊಂಡಿದ್ದಾರೆ. ವಡ್ಡನಕೇರಾ ಗ್ರಾಮದಲ್ಲಿ ಲಘು ಭೂಕಂಪನವಾಗಿದ್ದು ಯಾರು ಆತಂಕ ಪಡುವ ಆಗತ್ಯವಿಲ್ಲಾ ಎಂದು ಡಿಸಿ ಗೋವಿಂದ್ ರೆಡ್ಡಿ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಗ್ರಾಮಕ್ಕೆ ಹುಮನಾಬಾದ್ ಶಾಸಕ ಸಿದ್ದು ಪಾಟೀಲ್ ಭೇಟಿ ನೀಡಿ, ಲಘು ಭೂಕಂಪನದಿಂದ ಏನು ಆಗಲ್ಲಾ ಭಯಪಡಬೇಡಿ ಎಂದು ಹೇಳಿದ್ರು… ಜೊತೆಗೆ ಚಿಟ್ಟಗುಪ್ಪ ತಹಶಿಲ್ದಾರ, ಗಣಿ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.




