ಮಲ್ಪೆ: 36 ಲಕ್ಷದ ಮೊಬೈಲ್ ಟವರ್ ಕಳವು!

ಮಲ್ಪೆ: ಕೊಡವೂರು ಗ್ರಾಮದ ಶ್ರೀನಿವಾಸ ಅವರ ಜಾಗದಲ್ಲಿ ಅಳವಡಿಸಲಾದ ಮೊಬೈಲ್‌ ಟವರ್‌, ಡೀಸೆಲ್‌ ಜನರೇಟರ್‌ ಬ್ಯಾಟರಿ ಸೇರಿದಂತೆ ಇತರ ಉಪಕರಣಗಳನ್ನು ಕಳವು ಮಾಡಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟೆಲಿಕಾಂ ಟವರ್ಗಳನ್ನು ನೋಡಿಕೊಳ್ಳುವ ಟೆಕ್ನೀಷಿಯನ್‌ ಬಂದು ನೋಡಿದಾಗಲೇ ವಿಷಯ ಬೆಳಕಿಗೆ ಬಂದಿದೆ.

ಕಳವು ಮಾಡಲಾದ ಸೊತ್ತಿನ ಒಟ್ಟು ಮೌಲ್ಯ 36,75,196 ರೂಪಾಯಿ ಎಂದು ಅಂದಾಜಿಸಲಾಗಿದೆ.

Latest Indian news

Popular Stories