ಮಂಗಳೂರು, ಜ.19: ಅಕ್ರಮವಾಗಿ ಮಾದಕ ದ್ರವ್ಯ ಸಾಗಾಟ ಮಾಡುತ್ತಿದ್ದ ಚೆಂಬುಗುಡ್ಡೆ ನಿವಾಸಿ ಸಿಯಾಮು(26) ಎಂಬಾತನನ್ನು ಎಸಿಪಿ ಧನ್ಯ ನಾಯಕ್ ನೇತೃತ್ವದ ಮಾದಕ ದ್ರವ್ಯ ನಿಗ್ರಹ ದಳದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಲ್ಲಾಪು ಯೂನಿಟಿ ಹಾಲ್ ಮೈದಾನದ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ತಂಡವು 1.05 ಗ್ರಾಂ ಎಂಡಿಎಂಎ ಡ್ರಗ್ ಜಪ್ತಿ ಮಾಡಿದೆ.
ಮಾದಕ ದ್ರವ್ಯ ವಿರೋಧಿ ತಂಡ ರಚನೆಯಾದ ನಂತರ ಈ ಬಂಧನವು ನಾಲ್ಕು ಮಹತ್ವದ ಪ್ರಕರಣಗಳು ಸೇರಿದಂತೆ 65 ಪ್ರಕರಣಗಳನ್ನು ದಾಖಲಿಸಿದೆ. ಆರು ವ್ಯಕ್ತಿಗಳನ್ನು ಬಂಧಿಸಿ ನಂತರ ಜೈಲಿಗೆ ಕಳುಹಿಸಲಾಗಿದೆ. ಲಕ್ಷ ರೂಪಾಯಿ ಮೌಲ್ಯದ ಗಾಂಜಾ, ಎಂಡಿಎಂಎ ಮತ್ತು ಎಲ್‌ಎಸ್‌ಡಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಎಸಿಪಿ ಧನ್ಯಾ ನಾಯಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಇನ್ಸ್ ಪೆಕ್ಟರ್ ಬಾಲಕೃಷ್ಣ, ಉಳ್ಳಾಲ ಪಿಎಸ್ ಐ ಧನರಾಜ್, ಶಾಜು ನಾಯರ್, ಮಹೇಶ್, ಅಕ್ಬರ್ ಯಡ್ರಾಮಿ, ನವೀನ್ ಕೆ.ಪಿ. ಭಾಗವಹಿಸಿದ್ದರು.