CrimeDakshina KannadaFeatured Story

ಮಂಗಳೂರು: ಪತಿಯನ್ನು ಕೊಂದು ಕಥೆ ಕಟ್ಟಿದ ಪತ್ನಿ; ಪೋಸ್ಟ್ ಮಾರ್ಟಂನಲ್ಲಿ ಬಯಲಾಯಿತು ಕೃತ್ಯ

ಮಂಗಳೂರು: ತನ್ನ ಪತಿಯನ್ನೇ ಉಸಿರುಗಟ್ಟಿಸಿ ಕೊಲೆಗೈದ ಪತ್ನಿ ಕೊನೆಗೂ ಪೊಲೀಸರ ಬಲೆಗಡ ಬಿದ್ದ ಘಟನೆ
ನಗರದ ನಂತೂರು ಬಳಿ ಸಂಭವಿಸಿದೆ.
ನಂತೂರು ಸಮೀಪ ಬಾಡಿಗೆ ಮನೆಯಲ್ಲಿ
ವಾಸವಿದ್ದ ಗದಗ ಮೂಲದ ಹನುಮಂತಪ್ಪ (39) ಕೊಲೆಯಾದವರು. ಈತನ ಪತ್ನಿ, ಗೀತಾ ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ವಿಪರೀತ ಕುಡಿತದ ಚಟ ಹೊಂದಿದ್ದ ಹನುಮಂತಪ್ಪ ಮದ್ಯಪಾನ ಮಾಡಿ ಬಂದು ಪ್ರತಿದಿನ ಹೆಂಡತಿ ಜೊತೆ ಜಗಳ ಮಾಡುತ್ತಿದ್ದ ಎನ್ನಲಾಗಿದೆ.

ಜ.10ರಂದು ರಾತ್ರಿ ವಿಪರೀತ ಕುಡಿದು ಬಂದಿದ್ದ ಹನುಮಂತಪ್ಪ ಪತ್ನಿಯೊಂದಿಗೆ ಗಲಾಟೆ ಮಾಡಿದ್ದ. ಈ ವೇಳೆ ಪತ್ನಿ ಗೀತಾ ಹನುಮಂತಪ್ಪನ ಕುತ್ತಿಗೆ ಬಿಗಿ ಹಿಡಿದು ಬಳಿಕ ಪಂಚೆಯಿಂದ ಬಿಗಿದು ಹತ್ಯೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಆ ಬಳಿಕ ತನ್ನ ಗಂಡ ವಿಪರೀತ ಕುಡಿತದಿಂದ ಮೃತಪಟ್ಟಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಳು.

ಆದರೆ ಶವ ಪರೀಕ್ಷೆಯಲ್ಲಿ ಹನುಮಂತಪ್ಪನ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ತಿಳಿದುಬಂತು. ಗೀತಾಳನ್ನು ವಿಚಾರಣೆಗೊಳಪಡಿಸಿದಾಗ ಹನುಮಂತಪ್ಪನ ಕೊಲೆ ಮಾಡಿರುವುದು ಗೊತ್ತಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button