ಮಣಿಪಾಲ: ಯುವಕ ಕಾಣೆ

ಮಣಿಪಾಲ: ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದ ಯುವಕ ಕಾಣೆಯಾದ ಕುರಿತು ಪ್ರಕರಣ ದಾಖಲಾಗಿದೆ.

ಕಾಣೆಯಾದ ಮಾರುತಿ ತಳವಾರ (27) ಇವರು ಮಣಿಪಾಲದಲ್ಲಿ ಸೆಕ್ಯುರಿಟಿ ಕಲೆಸ ಮಾಡಿಕೊಂಡಿದ್ದು, ಕೆಲಸ ಕಷ್ಟ ಆಗುತ್ತಿದೆ. ಕೆಲಸ ಬಿಟ್ಟು ಬೇರೆ ಕಡೆ ಕೆಲಸ ಮಾಡುವುದಾಗಿಯೂ ಹೇಳುತ್ತಿದ್ದವರು ದಿನಾಂಕ 08/12/2023 ರಂದು ಮಧ್ಯಾಹ್ನ 12:30 ಗಂಟೆಯ ಸಮಯಕ್ಕೆ ತಾನು ವಾಸವಿದ್ದ ಬಾಡಿಗೆ ಮನೆಯಿಂದ ಹೋದವರು ಫೋನ್‌ ಸಂಪರ್ಕಕ್ಕೆ ಸಿಗದೇ, ಸಂಬಂಧಿಕರ ಮನೆಗೂ ಹೋಗದೇ, ಬೇರೆ ಕಡೆ ಕೆಲಸಕ್ಕೂ ಹೋಗದೇ ಕಾಣೆಯಾಗಿರುತ್ತಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 53/2024 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ .

Latest Indian news

Popular Stories