ಕಾರವಾರ : ರಾಜ್ಯದ ಮೀನುಗಾರಿಕೆ ಮತ್ತು ಬಂದರು ಒಳನಾಡು ಸಚಿವ ಮಂಕಾಳು ವೈದ್ಯ ಅವರು ರವಿವಾರ ತಾವೇ ಖುದ್ದಾಗಿ ಬೋಟ್ ಚಲಾಯಿಸಿಕೊಂಡು ಸಮುದ್ರಕ್ಕೆ ಹೋಗಿ ಅರಬ್ಬೀ ಸಮುದ್ರಕ್ಕೆ ಬಾಗಿನ ಅರ್ಪಿಸಿದರು.
ರಾಜ್ಯದ ಕರಾವಳಿಯಲ್ಲಿ ಈ ಬಾರಿ ತೀವ್ರ ಮತ್ಸ್ಯ ಕ್ಷಾಮ ಉಂಟಾಗಿದ್ದು , ನೆಲಕಚ್ಚಿರುವ ಮೀನುಗಾರಿಕಾ ಉದ್ಯಮ ಚೇತರಿಕೆಯಾಗಲಿ ಎಂದು ಪೂಜೆ ಸಲ್ಲಿಸಿದ ಸಚಿವ ಮಂಕಾಳ ವೈದ್ಯ , ಸಾಕಷ್ಟು ಪ್ರಮಾಣದಲ್ಲಿ ಮೀನು ಬಲೆಗೆ ಸಿಗಲಿ ಎಂದು ಅಳ್ವೆಕೋಡಿಯ ಶ್ರೀ ದುರ್ಗಾ ಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ , ಮೀನುಗಾರರ ಒಳಿತಿಗಾಗಿ ದೇವಿಯಲ್ಲಿ ಪ್ರಾರ್ಥಿಸಿಕೊಂಡರು.
ಅರಬ್ಬೀ ಸಮುದ್ರಕ್ಕೆ ಬಾಗಿನ ಅರ್ಪಿಸಲು ತೆರಳುವಾಗ ಸಚಿವ ಮಂಕಾಳು ವೈದ್ಯ ಅವರಿಗೆ ಭಾರೀ ಕಡಲ ಅಲೆಗಳು ಎದುರಾದವು. ಅಲೆಗಳ ಅಬ್ಬರದ ನಡುವೆಯೂ ಸಹ ಯಾವುದೇ,ಆತಂಕ , ಭಯವಿಲ್ಲದೆ ನಿರಾಳವಾಗಿ ತಾವೆ ಬೋಟ್ ಚಲಾಯಿಸುವ ಮೂಲಕ ತಾವೊಬ್ಬ ಪಕ್ಕಾ ಮೀನುಗಾರ ಎಂದು ಸಾಬೀತು ಮಾಡಿದರು.
…….
.