Crime

ಪೈಲಟ್ ತರಬೇತಿ, ಪ್ರಮಾಣಪತ್ರ ವಿತರಿಸಿದ ಮಾಥುರ್

ಬೀದರ್,ಫೆ.15:- ಭಾರತೀಯ ವಾಯು ಸೇನಾ ತರಬೇತಿ ವಿಭಾಗದ ಮುಖ್ಯಸ್ಥ ಆರ್.ಡಿ. ಮಾಥುರ ಅವರು ಬೀದರ್ ವಾಯು ಸೇನಾ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿದ್ದರು.
ಅವರು ಪೈಲಟ್ ಹಾಗೂ ಶಸ್ತ್ರಾಸ್ತ್ರ ವ್ಯವಸ್ಥೆ ನಿರ್ವಾಹಕರ ತರಬೇತಿ ಮುಕ್ತಾಯ ಹಾಗೂ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ದಲ್ಲಿ ಭಾಗವಹಿಸಿದರು . ಕೇಂದ್ರದ ನಿರ್ವಹಣೆ ಹಾಗೂ ಆಡಳಿತ ಸಿದ್ಧತೆ ಗಳ ಬಗ್ಗೆ ಕೇಂದ್ರದ ಮುಖ್ಯಸ್ಥ ಏರ್ ಕಮಾಡೋರ ನಿಖಿಲೇಶ್ ಗೌತಮ್ ಅವರು ಮಾಹಿತಿ ನೀಡಿದರು.
ವಾಯು ಪಡೆ ಅಧಿಕಾರಿ ಸಮರ್ಥ ಶುಕ್ಲ ಅವರಿಗೆ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ ಯನ್ನು ನೀಡಿ ಗೌರವಿಸ ಲಾಯಿತು. ತರಬೇತಿ ಮುಗಿಸಿದ ತಂಡದಲ್ಲಿ 18 ಪೈಲಟ್ ಹಾಗೂ ಇಬ್ಬರು ಶಸ್ತ್ರಾಸ್ತ್ರ ವ್ಯವಸ್ಥೆ ನಿರ್ವಾಹಕರು ಇದ್ದರು. ಎಲ್ಲ ವಿದ್ಯಾರ್ಥಿ ಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ನೀಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button