ಕಾಪು: ಕಟಪಾಡಿ ನಿವಾಸಿ ನಾಪತ್ತೆ

ಕಾಪು: ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ.

ಶ್ರೀನಿವಾಸ ಸಾಲ್ಯಾನ್ (45) ರವರು ದುಗ್ಗುಪಾಡಿ ಮಟ್ಟು ಕಟಪಾಡಿ ಮನೆಯಲ್ಲಿ ಒಬ್ಬರೇ ವಾಸವಾಗಿದ್ದು, ಶ್ರೀನಿವಾಸ್ ಸಾಲ್ಯಾನ್ ರವರು ಶೇಖರ್ ರವರ ಮಾಲಕತ್ವದ ದೋಣಿಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿರುತ್ತಾರೆ.

ದಿನಾಂಕ:30-01-2024 ರಂದು ಕೆಲಸಕ್ಕೆ ಹೋಗದೇ ಬೆಳಿಗ್ಗೆ 10:00 ಗಂಟೆಗೆ ಮನೆಯ ನೆರೆಕರೆಯವರಾದ ಪದ್ಮ ರವರಲ್ಲಿ ಕಟಪಾಡಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ವಾಪಾಸು ಬಾರದೇ ಕಾಣೆಯಾಗಿರುತ್ತಾರೆ.  

ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2024,  ಕಲಂ : ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories