ಖಾನಾಪುರದಲ್ಲಿ ರೈತರಿಂದ ಸಂಸದ ಹೆಗಡೆಗೆ ಹಿಡಿ ಶಾಪ

ಬೆಳಗಾವಿ : ಉತ್ತರಕನ್ನಡ ಜಿಲ್ಲೆಯ ಬಿಜೆಪಿ ಸಂಸದ ಅನಂತ್​ಕುಮಾರ್ ಹೆಗಡೆಗೆ ಬುಧುವಾರ ರೈತರು ಹಿಡಿಶಾಪ ಹಾಕಿದ ಘಟನೆ ನಡೆದಿದೆ. ನಾವು ಕೊಟ್ಟ ಓಟಿನಿಂದ ನೀ ಇಷ್ಟು ರಕ್ಷಣೆಯಲ್ಲಿ ಓಡಾಡುತ್ತಿರುವೆ ಎಂದು ಹಂಗಿಸಿದ ಪ್ರಸಂಗ ಸಹ ನಡೆದಿದೆ.

ಖಾನಾಪುರದಲ್ಲಿ ಅವರ ಅಪ್ತರ ಬೈಟಕ್ ಮುಗಿಸಿ ಬರುವ ದಾರಿಯಲ್ಲಿ ರೈತರು ಸಂಸದ ಅನಂತ ಕುಮಾರ್ ಹೆಗಡೆಗೆ ಮನವಿ ನೀಡಲು ನಿಂತಿದ್ದರು. ರೈತರ ಪಕ್ಕವೇ ಕಾರ್ ನಲ್ಲಿ ತೆರಳಿದ ಸಂಸದ ಹೆಗಡೆ , ರೈತರ ಮನವಿ ಪಡೆಯಲು ಕಾರ್ ನಿಲ್ಲಿಸದೆ, ಕೆಳಗೆ ಇಳಿಯದೆ ತೆರಳಿದರು. ಆಗ ರೈತರು
ಕಾರ್​ಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಆದರೂ ಕಾರ್ ನಿಲ್ಲಿಸದೆ ಸಂಸದರು ತೆರಳಿದರು.ಇದರಿಂದ ಕೆಂಡಾ ಮಂಡಲರಾರ ರೈತರು ” ನೀವು ಗೆದ್ದ ಬಳಿಕ ಮತ ಹಾಕಿ ಗೆಲ್ಲಿಸಿದ ಕ್ಷೇತ್ರದ ಮತದಾರರ‌‌ ಕಣ್ಣಿಗೆ ಕಾಣಿಸಿಕೊಳ್ಳದೆ ಓಡಾಡುತ್ತೀರಿ. ಇವತ್ತಿನ ದರ್ಪಕ್ಕೆ ನಮ್ಮ ಮತ‌, ನಾವು ನೀಡಿದ ಮತ ಕಾರಣ ಎಂದು ಆಕ್ರೋಶ ಹೊರ ಹಾಕಿದರು.

ಸಂಸದ ಅನಂತ ಕುಮಾರ್ ಹೆಗಡೆ ವರ್ತನೆಯಿಂದ ಆಕ್ರೋಶಗೊಂಡ ರೈತರು, ಕಾರ್‌ಗೆ​​ ಮುತ್ತಿಗೆ ಹಾಕಲು ಯತ್ನಿಸಿದರು. ರೈತ ಸಂಘಟನೆ ಮುಖಂಡರು, ಸಂಸದರ ವಿರುದ್ಧ ಧಿಕ್ಕಾರ ಕೂಗಿದರು. ಇಂತಹ ಸಂಸದರು ನಮಗೆ ಬೇಡ.‌ ಈ ಬಾರಿ ಚುನಾವಣೆಯಲ್ಲಿ ನಾವು “ನೋಟಾ” ಚಲಾಯಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಸದ ಹೆಗಡೆ ಖಾನಾಪುರದಲ್ಲಿ ನಡೆದ ಸಭೆಯಲ್ಲಿ ಕಳೆದ ತಿಂಗಳು ಪಕ್ಷದ ಕಾರ್ಯಕರ್ತರ ರಿಂದಲೇ

ತೀವ್ರ ಪ್ರತಿರೋಧ ಎದುರಿಸಿದ್ದರು. ನಾಲ್ಕು ವರ್ಷದ ನಂತರ ಖಾನಾಪುರಕ್ಕೆ ಬಂದಿದ್ದೀರಾ ? ನೀವು ಈ ಸಲ ಖಾನಾಪುರದ ಕಾರ್ಯಕರ್ತರಿಗೆ ಸ್ಥಾನ ಬಿಟ್ಟುಕೊಡಿ ಎಂದು ಆಕ್ರೋಶ ಹೊರ ಹಾಕಿದ್ದರು.

Latest Indian news

Popular Stories