ಪಡುಬಿದ್ರಿ: ಟಿಪ್ಪರ್ ಲಾರಿ ಕದ್ದು ಖದೀಮರು ಮಾಡಿದ್ದೇನು ಗೊತ್ತಾ?

ಸಾಂದರ್ಭಿಕ ಚಿತ್ರ

ಪಡುಬಿದ್ರಿ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳರು ಟಿಪ್ಪರ್ ಲಾರಿ ಕದ್ದು ಸುದ್ದಿಯಾಗಿದ್ದಾರೆ.

ಶಾಶ್ವತ್ (24) ಪಡುಬಿದ್ರಿಯವರ ಟಿಪ್ಪರ್ ಲಾರಿಯನ್ನು ರಾತ್ರಿ ಕಾಪುವಿನ ತೆಂಕ ಎರ್ಮಾಳ್ ಗ್ರಾಮದ ಕಾಮತ್ ಪೆಟ್ರೋಲ್ ಪಂಪ್ ಬಳಿ ಇರುವ ಮನೆಯ ಬಳಿ ಇರಿಸಿದ್ದರು. ಟಿಪ್ಪರ್ ಲಾರಿಯನ್ನು ಯಾರೋ ಕಳ್ಳರು ಮನೆಯ ಬಳಿಯಿಂದ ಕಳವು ಮಾಡಿ ತೆಗೆದುಕೊಂಡು ಹೋಗಿದ್ದರು.

ಲಾರಿಯ ಇರುವಿಕೆ ಬಗ್ಗೆ ಮೊಬೈಲ್ ನಲ್ಲಿ ಅಳವಡಿಸಿದ್ದ ಜಿಪಿಎಸ್’ನಲ್ಲಿ ನೋಡಿದಾಗ ಕಾಪು ಠಾಣಾ ವ್ಯಾಪ್ತಿಯ ಪಾಂಗಾಳದ ಬ್ರಿಡ್ಜ್ ಬಳಿ ಇರುವುದಾಗಿ ತೋರಿಸಿದೆ.

ಅಲ್ಲಿಗೆ ತೆರಳಿ ನೋಡಿದಾಗ ಟಿಪ್ಪರ್ ಲಾರಿಯನ್ನು ಉಡುಪಿ ಕಡೆಗೆ ಮುಖ ಮಾಡಿ ಇರಿಸಿ ಜಾಕ್ ಹಾಗೂ ಕಲ್ಲನ್ನು ಬಳಸಿ ಟಿಪ್ಪರ್ ಲಾರಿಯ ಸ್ಟೆಪ್ನಿ ಸೇರಿ 05 ಡಿಸ್ಕ್ ಸಮೇತ 05 ಟಯರ್‌ ಗಳನ್ನು, ಲಾರಿಯ ಬ್ಯಾಟರಿಯನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.

ಕಳವಾದ ಟಿಪ್ಪರ್ ಲಾರಿಯ ಸ್ಟೆಪ್ನಿ ಸೇರಿ 05 ಡಿಸ್ಕ್ ಸಮೇತ 05 ಟಯರ್‌ ಗಳ ಮತ್ತು ಲಾರಿಯ ಬ್ಯಾಟರಿಯ ಅಂದಾಜು ಮೌಲ್ಯ ರೂ 98,000/- ಆಗಿರುತ್ತದೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 22/2024 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

Latest Indian news

Popular Stories