ಶಿರ್ವ: ಮನೆ ಬಳಿಯ ಕಸವನ್ನು ರಾಶಿ ಹಾಕಿ ಬೆಂಕಿಕೊಟ್ಟಿದ್ದು ಬೆಂಕಿ ಆಕಸ್ಮಾತ್ ಮಹಿಳೆಯೊಬ್ಬರಿಗೆ ತಗುಲಿ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತ ಮಹಿಳೆಯನ್ನು ಶಾರದ ಎಂದು ಗುರುತಿಸಲಾಗಿದೆ.
ಬೆಂಕಿ ಏಕಾಏಕಿ ಅವರು ಧರಿಸಿದ್ದ ಸೀರೆಗೆ ತಗುಲಿ ಮೈಕೈಗೆ ಬೆಂಕಿ ತಗುಲಿ ತೀವ್ರ ತರಹದ ಗಾಯಗೊಂಡಿದ್ದು ಕೂಡಲೇ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದು, ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ:11/2/2024 ರಂದು ರಾತ್ರಿ 08.28 ಗಂಟೆಗೆ ಮೃತಪಟ್ಟಿರುತ್ತಾರೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಯುಡಿಆರ್ ನಂ 02/2024 ಕಲಂ: 174 ಸಿಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.