ಪಡುಬಿದ್ರಿ: ಸೈಬರ್ ಕಳ್ಳರ ಹಾವಳಿ ದಿನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಾನಾ ರೀತಿಯ ಕಸರತ್ತು ಮಾಡಿ ಜನರನ್ನು ವಂಚಿಸಲಾಗುತ್ತಿದೆ.
ಇದೀಗ ಪಡುಬಿದ್ರಿಯ ನಂದಿಕೂರಿನ ಶಿಫ್ಟ್ ಇನ್’ಚಾರ್ಜ್ ಕೆಲಸ ಮಾಡಿಕೊಂಡಿರುವ ತಮಿಳುನಾಡು ಮೂಲದ ಟಿಯಾಗು ಅವರಿಗೆ ಬರೋಬ್ಬರಿ ಹದಿನೈದು ಲಕ್ಷ ರೂಪಾಯಿ ವಂಚಿಸಲಾಗಿದೆ.
ಫೆಡ್ಎಕ್ಸ್ ಕೊರಿಯರ್ ಎಂಬ ಕಂಪೆನಿಯಿಂದ ಕರೆ ಮಾಡುತ್ತಿರುವುದಾಗಿ ಕರೆಯಲ್ಲಿ ಓರ್ವ ವ್ಯಕ್ತಿಯು ಇಂಗ್ಲೀಷ್ನಲ್ಲಿ ಮಾತನಾಡುತ್ತಾ “ನೀವು ಮುಂಬೈನಿಂದ ಇರಾನ್ಗೆ ಕೊರಿಯರ್ ಮಾಡಿದ ಕೊರಿಯರ್ ಡೆಲಿವರಿ ಆಗಲಿಲ್ಲ” ಎಂದು ಹೇಳಿದ್ದಾನೆ. ಆಗ ಸಂತ್ರಸ್ಥರು “ಯಾವುದೇ ಕೊರಿಯರ್ ಆರ್ಡರ್ ಮಾಡಲಿಲ್ಲ ಕೊರಿಯರ್ನಲ್ಲಿ ಏನಿದೆ” ಎಂದು ಕೇಳಿದಾಗ ಆ ವ್ಯಕ್ತಿಯು Department:Fedex Mumbai Andheri Branch parcel sent date 10/01/2024 receiver name ZHANG LIN Contact number 9862737889 Parcel tracking ID 22892321291 Parcel contents expired passport -5 SBI credit cards 4 cloths 2 kgs toy-1 MBDA 450 grams ಪಾರ್ಸೆಲ್ನಲ್ಲಿ ಇದೆ ಎಂದು ಹೇಳಿ ನಿಮ್ಮ ಐಡಿಯು ಮಿಸ್ಯೂಸ್ ಆಗಿದೆ MBDA ಡ್ರಗ್ ಆಗಿದ್ದು ಅಕ್ರಮವಾಗಿ ಕಳುಹಿಸಲಾಗುತ್ತಿದೆ ನೀವು ಸಿಕ್ಕಿಬಿದ್ದರೆ ನಿಮಗೆ ಜೀವನ ಪರ್ಯಂತ ಕೇಸು ದಾಖಲಾಗುತ್ತದೆ ಎಂದು ಹೇಳಿ ನೀವು ಸೈಬ್ರರ್ ಕಂಪ್ಲೇಟ್ ಕೊಡುವುದು ಉತ್ತಮ ಎಂದು ಮುಂಬೈ ಸೈಬರ್ ಕ್ರೈಂ ಬ್ರಾಂಚ್ ಗೆ ಕರೆಯನ್ನುವರ್ಗಾವಣೆ ಮಾಡುತ್ತೇನೆ ಎಂದು ಹೇಳಿ ನಾಟಕ ಮಾಡಿದ್ದಾನೆ.
ಒಂದು ನಿಮಿಷದ ನಂತರ ಇನ್ನೊರ್ವ ವ್ಯಕ್ತಿ ಮಾತನಾಡಿ ನಿಮ್ಮ ಅಕೌಂಟ್ ಚೆಕ್ ಮಾಡಬೇಕಿದೆ ಎಂದು ಹೇಳಿ ನಂಬಿಸಿ ಸಂತ್ರಸ್ಥರ ಐಸಿಐಸಿಐ ಅಪ್ಲಿಕೇಶನ್ನಲ್ಲಿರುವ ಪ್ರಿ ಅಪ್ರೋವಡ್ ಲೋನ್ಗೆ ಹೋಗಿ ಪರ್ಸನಲ್ ಲೋನ್ ಗೆ ಕ್ಲಿಕ್ ಮಾಡಲು ಹೇಳಿ ಪ್ರಿ ಅಪ್ರೋವಡ್ ಲೋನ್ಗೆ ಹೋಗಿ ಪರ್ಸನಲ್ ಲೋನ್ ಗೆ ಕ್ಲಿಕ್ ಮಾಡಿದಾಗ ಸಿಗುವ ಲೋನ್ ಮೊತ್ತ 15,62,921/- ಎಂದು ಬಂದಿದೆ.
ಅಪ್ಲೈ ಬಟನ್ ಕ್ಲಿಕ್ ಮಾಡಿ ಸಂತ್ರಸ್ಥ ಟಿಯಾಗು ಇಂಟರ್ ನೆಟ್ ಲಾಗಿನ್ ಒಟಿಪಿ ಯನ್ನು ಫೋನ್ ನಲ್ಲಿದ್ದ ವ್ಯಕ್ತಿಗೆ ನೀಡಿದ್ದು, ಆಗ ಹಣವು ಬ್ಯಾಂಕ್ ಖಾತೆಗೆ ಜಮಾ ಆಗಿದ್ದು, ನಂತರ ಆ ವ್ಯಕ್ತಿಯು ಸೈಬರ್ ಕ್ರೈಮ್ ನವರು ಎಂದು ನಂಬಿಸಿ ಅಕೌಂಟ್ ನಂಬ್ರ ನೀಡಿ ಖಾತೆಗೆ ಪಿರ್ಯಾದಿದಾರರ ಅಕೌಂಟ್ನಲ್ಲಿದ್ದ 15,62,921/- ಮೊತ್ತವನ್ನು ಅಕೌಂಟ್ಗೆ ಆರ್.ಟಿ.ಜಿ.ಎಸ್.ಮೂಲಕ ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ.
ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 11/2024, ಕಲಂ: 419, 420 ಐಪಿಸಿ ಮತ್ತು ಕಲಂ: 66(ಸಿ), 66(ಡಿ) ಐಟಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.
ಇತ್ತೀಚ್ಚಿಗೆ ಉಡುಪಿ ಜಿಲ್ಲೆಯಲ್ಲಿ ಸೈಬರ್ ಕಳ್ಳತನ ಹೆಚ್ಚಾಗುತ್ತಿದ್ದು ಜನರು ಈ ಕುರಿತು ಎಚ್ಚೆತ್ತುಕೊಳ್ಳಬೇಕಾಗಿದೆ.