ಕಾರ್ಕಳ: ಬೈಕ್ ಅಪಘಾತಗೊಂಡು ಸವಾರ ಮೃತಪಟ್ಡಿದ್ದಾರೆ
ಸಾಣೂರು ಗ್ರಾಮದ ಮುದ್ದಣ್ಣನಗರ ಬೆರ್ಕೆದಗುರಿ ಎಂಬಲ್ಲಿ ಹರೀಶ ಎಂಬುವವರಿಗೆ ರಸ್ತೆ ಅಪಘಾತವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಕುರಿತು ವರದಿಯಾಗಿದೆ.
ಶ್ರೀರಾಮನಗರ ವಾಸಿ ಹರೀಶ (46)ಎಂಬುವವರು ಟಿವಿಎಸ್ ವೇಗೋ ಸ್ಕೂಟರ್ KA-20-ED-5665 ಸಮೇತ ರಸ್ತೆಯ ಬದಿಯ ತೋಡಿಗೆ ಬಿದ್ದು ಮುಖಕ್ಕೆ ರಕ್ತಗಾಯವಾಗಿದ್ದು ಕುತ್ತಿಗೆಗೆ ಗಂಭೀರ ಗಾಯವಾಗಿದ್ದು ಹರೀಶರವರು ದಿನಾಂಕ 17/01/2024 ರಂದು ಸಂಜೆ ಟಿವಿಎಸ್ ವೇಗೋ ಸ್ಕೂಟರ್ KA-20-ED-5665 ನ್ನು ಮುದ್ದಣ್ಣ ನಗರ ಕಡೆಯಿಂದ ತನ್ನ ಮನೆಯಾದ ಶ್ರೀರಾಮನಗರ ಕಡೆಗೆ ಸವಾರಿ ಮಾಡಿಕೊಂಡು ರಸ್ತೆಯ ಬಲಬದಿಗೆ ಹೋಗಿ ಸ್ಕೂಟರ್ ಸಮೇತ ತೋಡಿಗೆ ಬಿದ್ದು ಕುತ್ತಿಗೆಗೆ ಗಂಭೀರ ಸ್ವರೂಪದ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 11/2024 ಕಲಂ: 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.