Crime

ನಿವೇಶ ವರ್ಗಾವಣೆಗೆ ಆಕ್ಷೇಪಣೆ ಸಲ್ಲಿಸಲು ಕಾಲವಕಾಶ

ರಾಯಚೂರು,ಸೆ.29:- ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಹಂಚಿಕೆಯಾಗಿರುವ ನಿವೇಶನದ ಹಂಚಿಕೆದಾರರು ಮೃತಪಟ್ಟ ಕಾರಣ ಸದರಿ ನಿವೇಶನ ಸಂಬಂಧಪಟ್ಟ ವಾರಸುದರರಿಗೆ ನಿವೇಶನ ಕಟ್ಟಡ ಸಹಿತ ಅವರ ಹೆಸರುಗಳಿಗೆ ವರ್ಗಾವಣೆಗೆ ಆಕ್ಷೇಪಣೆ ಸಲ್ಲಿಸಲು ಕಾಲವಕಾಶ ನೀಡಲಾಗಿದೆ.
ನಿವೇಶನ ಸಂಖ್ಯೆ.89ರ ಮೆ.ನವೋದಯ ಟ್ರೇಡಿಂಗ್ ಕಂಪನಿ, ರಾಯಚೂರು ಮಾಲೀಕರು ದಿ.ಸೋಮಚಿನ್ನ ರಾಮನಗೌಡರಿಂದ ಸೋಮ ವೇಂಕಟೇಶ ಗೌಡ ಮತ್ತು ಸೋಮ ಶ್ರೀನಿವಾಸ ಗೌಡ ದಿ.ಸೋಮ ಚಿನ್ನ ರಾಮನಗೌಡರ ಹೆಸರಿಗೆ ವರ್ಗಾವಣೆ ಮಾಡಬೇಕಾಗಿದೆ.
ವರ್ಗಾವಣೆಗೆ ಸಂಬಂಧಿಸಿ ಪೇಟೆ ಕಾರ್ಯಕರ್ತರು, ರೈತರು ಹಾಗೂ ವರ್ತಕರು ಏನಾದರೂ ಬಾಕಿ ಮೊತ್ತ ಮತ್ತು ಆಕ್ಷೇಪಣೆ ಇದ್ದಲ್ಲಿ. 15 ದಿನದೊಳಗಾಗಿ ಕಾರ್ಯಾಲಯಕ್ಕೆ ಸಲ್ಲಿಸಬೇಕೆಂದು ಎಪಿಎಂಸಿ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button