ಪಿಎಂ ಕಿಸಾನ್ ಯೋಜನೆ: ರೈತರ ಬ್ಯಾಂಕ್ಖಾ ತೆಗೆ 35.70 ಕೋಟಿ ರೂ. ಅನುದಾನ ವರ್ಗಾವಣೆ

ಬೀದರ ಜೂನ್ 16 (ಕ.ವಾ.):ಕರೋನಾ ಸಂಕಷ್ಟದ ಸಮಯದಲ್ಲಿ ರೈತ ಕುಟುಂಬಗಳಿಗೆ ಬಿತ್ತನೆ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸನ್ಮಾನ್ಯ ಪ್ರಧಾನ ಮಂತ್ರಿಯವರು ದಿನಾಂಕ 14.05.2021 ರಂದು ಕೇಂದ್ರ ಸರ್ಕಾರದ 8ನೇ ಕಂತಿನ ಅನುದಾನವನ್ನು 1,78,544 ರೈತರ ಬ್ಯಾಂಕ್ ಖಾತೆಗೆ ರೂ. 35.70 ಕೋಟಿಗಳು ಈಗಾಗಲೇ ವರ್ಗಾವಣೆ ಮಾಡಲಾಗಿದೆ.
ಪ್ರಾರಂಭದಿAದ ಮೊದಲನೇ ಕಂತು 1,91,113 ರೈತರಿಗೆ ರೂ 38.22 ಕೋಟಿಗಳು ಎರಡನೇ ಕಂತು 1,85,729 ರೈತರಿಗೆ ರೂ. 37.15

ಕೋಟಿಗಳು ಮೂರನೇ ಕಂತು 1,75,470 ರೈತರಿಗೆ ರೂ. 35.09 ಕೋಟಿಗಳು, ನಾಲ್ಕನೇ ಕಂತು 1,68,410 ರೈತರಿಗೆ ರೂ. 33.68 ಕೋಟಿಗಳು, ಐದನೇ ಕಂತು 1,60,598 ರೈತರಿಗೆ ರೂ.32.12 ಕೋಟಿಗಳು, ಆರನೇ ಕಂತು 1,49,297 ರೈತರಿಗೆರೂ. 29.85 ಕೋಟಿಗಳುಏಳನೇ ಕಂತು 1,20,879 ರೈತರಿಗೆ ರೂ.24.18 ಕೋಟಿಗಳು, ಎಂಟನೇ ಕಂತು 3608 ರೈತರಿಗೆ ರೂ. 0.73 ಕೋಟಿಗಳು ರೈತರು ತ್ರೆöÊಮಾಸಿಕ ನೋಂದಣಿಯ ಪ್ರಕಾರ ಕೇಂದ್ರದ ಅನುದಾನ ಒಟ್ಟು ಇಲ್ಲಿಯವರೆಗೆ ರೂ. 231 ಕೋಟಿಗಳು ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ.
ಜೂನ್ 12ರಂದು ಪ್ರಕಟವಾದ ಪ್ರಧಾನ ಮಂತ್ರಿ ಕಿಸಾನ ಸಮ್ಮಾನ್ ನಿಧಿಯೋಜನೆ ಮಾಹಿತಿಯ ಬಗ್ಗೆ ಈ ಮೇಲಿನಂತೆ ಸ್ಪಷ್ಟೀಕರಣ ನೀಡಲಾಗಿದೆ ಎಂದು ಬೀದರ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories