ಉಡುಪಿ | ಸ್ಟ್ರಾಂಗ್ ರೂಮ್ ಸೇರಿದ ಮತಪೆಟ್ಟಿಗೆ – ಬಿಗಿ ಭದ್ರತೆ

ಉಡುಪಿ, ಏ 27 : ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿರುವ ಮತ ಪೆಟ್ಟಿಗೆಗಳು ಉಡುಪಿಯ ಸೈಂಟ್ ಸಿಸಿಲೀಸ್ ವಿದ್ಯಾಸಂಸ್ಥೆಯಲ್ಲಿರುವ ಸ್ಟ್ರಾಂಗ್ ರೂಂ ಸೇರಿಕೊಂಡಿದೆ. ಜೂ.4ರಂದು ಮತಗಳ ಎಣಿಕೆ‌ ನಡೆಯಲಿದೆ. ಅಲ್ಲಿಯ ವರೆಗೆ ಭದ್ರತಾ ಕೊಠಡಿಗಳಿಗೆ ಸಶಸ್ತ್ರ ಪಡೆಗಳ ಮೂಲಕ ಭದ್ರತೆ ನೀಡಲಾಗುತ್ತದೆ.

ಉಡುಪಿ ಜಿಲ್ಲೆಯ 4 ಕ್ಷೇತ್ರ, ಚಿಕ್ಕಮಗಳೂರು ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಕ್ಕೆ ಸ್ಟ್ರಾಂಗ್ ರೂಂನಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾ ಚುನಾವಣಾಧಿಕಾರಿ ಡಾಕ್ಟರ್ ವಿದ್ಯಾಕುಮಾರಿ, ಜಿಲ್ಲಾ ಎಸ್ ಪಿ ಡಾಕ್ಟರ್ ಅರುಣ್ ಕೆ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ಸೀಲ್ ಮಾಡಲಾಗಿದೆ.

ಜೂ. ೪ರಂದು ಮತ ಎಣಿಕೆ ನಡೆಯಲಿದ್ದು, ಅಲ್ಲಿಯವರೆಗೂ ಇವಿಎಂ ಗಳನ್ನು ಸಶಸ್ತ್ರ ಪಡೆಗಳು ಹಾಗೂ ಪೊಲೀಸ್ ಸರ್ಪಗಾವಲಿನಲ್ಲಿ ಇಡಲಾಗುತ್ತಿದೆ.

Latest Indian news

Popular Stories