ತಮ್ಮ ಬೇಡಿಕೆ ಈಡೇರಿಸುವರೆಗೂ ಜಿ.ಎಸ್.ಟಿ ಪಾವತಿಸಬೇಡಿ – ವ್ಯಾಪರಸ್ಥರಿಗೆ ನರೇಂದ್ರ ಮೋದಿ ಸಹೋದರ ಕರೆ

ಥಾಣೆ: ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಮತ್ತು ಆಲ್ ಇಂಡಿಯಾ ಫೇರ್ ಪ್ರೈಸ್ ಶಾಪ್ ಅಸೋಸಿಯೇಶನ್‌ನ ಉಪಾಧ್ಯಕ್ಷ ಪ್ರಹ್ಲಾದ್ ಮೋದಿ ಶುಕ್ರವಾರ ವ್ಯಾಪಾರಿಗಳಿಗೆ ತಮ್ಮ ಬೇಡಿಕೆಗಳನ್ನು ಸರ್ಕಾರದ ಮೂಲಕ ಈಡೇರಿಸುವವರೆಗೂ ಜಿಎಸ್‌ಟಿ ಪಾವತಿಸದಂತೆ ಆಗ್ರಹಿಸಿದ್ದಾರೆ. ಈ ವಿಷಯದಲ್ಲಿ ಅಂದೋಲನವನ್ನು ಆರಂಭಿಸಲು ಉದ್ಯಮಿಗಳಿಗೆ ಕರೆ ನೀಡಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರಕ್ಕೆ ತಮ್ಮ ಸಂದೇಶವನ್ನು ತಿಳಿಸಲು ಪ್ರಹ್ಲಾದ್ ಮೋದಿ ಅವರು ಉದ್ಯಮಿಗಳ ಕೂಟದ ನೇತೃತ್ವ ವಹಿಸಿ, “ನಮ್ಮ ಅಂದೋಲನವು ಎಷ್ಟು ಪ್ರಭಾವಶಾಲಿಯಾಗಿರಬೇಕೆಂದರೆ ಉದ್ಧವ್ (ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ) ಮತ್ತು ನರೇಂದ್ರ (ಮೋದಿ) ನಿಮ್ಮ ಮನೆ ಬಾಗಿಲಿಗೆ ಬರುವಂತಾಗಬೇಕೆಂದು ಹೇಳಿದರು. ಅದೇ ಸಂದರ್ಭದಲ್ಲಿ ಪ್ರಹ್ಲಾದ್ ಮೋದಿ ಅವರು ದೇಶಾದ್ಯಂತ 6.50 ಲಕ್ಷ ನ್ಯಾಯಬೆಲೆ ಅಂಗಡಿ ಮಾಲೀಕರನ್ನು ಪ್ರತಿನಿಧಿ ಎಂದು ಹೇಳಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ಮತ್ತು ಅದರಿಂದ ಉಂಟಾದ ಲಾಕ್‌ಡೌನ್‌ನಿಂದ ಪ್ರಭಾವಿತವಾಗಿರುವ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವ್ಯಾಪಾರಿಗಳನ್ನು ಪ್ರಹ್ಲಾದ್ ಮೋದಿ ಭೇಟಿ ಮಾಡಿ ಸರಕಾರದ ವಿರುದ್ಧ ಅಂದೋಲನಕ್ಕೆ ಕರೆ ನೀಡಿದರು. ವ್ಯಾಪಾರಸ್ಥರಿರುವುದು ಪ್ರಜಾಪ್ರಭುತ್ವ ದೇಶದಲ್ಲಿ ವಿನಾಹ ಸರ್ವಾಧಿಕಾರಿ ದೇಶದಲ್ಲಿ ಅಲ್ಲ. ನರೇಂದ್ರ ಮೋದಿಯವರಾಗಲಿ ಅಥವಾ ಬೇರೆಯವರಾಗಲಿ ನಿಮ್ಮ ಮಾತನ್ನು ಕೇಳಬೇಕಾಗಿದೆ.ಮೊದಲು ನೀವು ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದು ಸರಕಾರ ನಮ್ಮ ಮಾತನ್ನು ಕೇಳದ ಹೊರತು ನಾವು GST ಅನ್ನು ಪಾವತಿಸುವುದಿಲ್ಲ ಎಂದು ಹೇಳಿ ಎಂದು ವ್ಯಾಪರಸ್ಥರಿಗೆ ಕರೆ ನೀಡಿದ್ದಾರೆ.

Latest Indian news

Popular Stories