100 ಕೋಟಿ ಪೊಂಜಿ ಸ್ಕೀಮ್ ಹಗರಣ : ನಟ ‘ಪ್ರಕಾಶ್ ರಾಜ್’ಗೆ ED ಸಮನ್ಸ್

ನವದೆಹಲಿ:100 ಕೋಟಿ ರೂ.ಗಳ ಪೊಂಜಿ ಸ್ಕೀಮ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಪ್ರಕಾಶ್ ರೈ ಅವರಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ನೀಡಿದೆ.

ನವೆಂಬರ್ 20ರಂದು ಮನಿ ಲಾಂಡರಿಂಗ್ ತಡೆ ಕಾಯ್ದೆಯ (PMLA) ನಿಬಂಧನೆಗಳ ಅಡಿಯಲ್ಲಿ ತಿರುಚಿರಾಪಳ್ಳಿ ಮೂಲದ ಪ್ರಣವ್ ಜ್ಯುವೆಲ್ಲರ್ಸ್ಗೆ ಸಂಬಂಧಿಸಿದ ಪಾಲುದಾರಿಕೆ ಸಂಸ್ಥೆಗೆ ಸಂಬಂಧಿಸಿದ ಆಸ್ತಿಗಳಲ್ಲಿ ತನಿಖಾ ಸಂಸ್ಥೆ ಶೋಧ ನಡೆಸಿದ ನಂತರ ಈ ಸಮನ್ಸ್ ನೀಡಲಾಗಿದೆ.ಪ್ರಣವ್ ಜ್ಯುವೆಲ್ಲರ್ಸ್ ಸೃಷ್ಟಿಸಿದ ನಕಲಿ ಚಿನ್ನದ ಹೂಡಿಕೆ ಯೋಜನೆಯ ವ್ಯಾಪಕ ತನಿಖೆಯ ಭಾಗವಾಗಿ ಪ್ರಕಾಶ್ ರೈ ಅವರಿಗೆ ಸಮನ್ಸ್ ನೀಡಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.

ಇಡಿ ನೇತೃತ್ವದ ದಾಳಿಯಲ್ಲಿ ವಿವಿಧ ದೋಷಾರೋಪಣೆ ದಾಖಲೆಗಳು, 23.70 ಲಕ್ಷ ರೂ.ಗಳ ಲೆಕ್ಕವಿಲ್ಲದ ನಗದು ಮತ್ತು 11.60 ಕೆಜಿ ತೂಕದ ಚಿನ್ನದ ಆಭರಣಗಳನ್ನ ವಶಪಡಿಸಿಕೊಳ್ಳಲಾಗಿದೆ.

Latest Indian news

Popular Stories