ಕಾರವಾರ: ಅಗತ್ಯ ವಸ್ತುಗಳ ಬೆಲೆ ಇಳಿಸಬೇಕು . ದುಡಿಯುವ ಜನರ ಶೋಷಣೆ ತಪ್ಪಿಸಬೇಕು. ಉದ್ಯೋಗ ಸೃಷ್ಟಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ರೈತ ಕೂಲಿ ಕಾರ್ಮಿಕರು ಕಾರವಾರದಲ್ಲಿ ಸಂಜೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಜಿಲ್ಲಾ ರಂಗ ಮಂದಿರದಿಂದ ಕಾರವಾರದ ಮುಖ್ಯ ರಸ್ಯೆಗಳಲ್ಲಿ ಸಾಗಿ, ತಹಶಿಲ್ದಾರರ ಕಚೇರಿ ತಲುಪಿದರು .ಅಲ್ಲಿ ಕೇಂದ್ರ ಬಿಜೆಪಿ ಎನ್ ಡಿ ಎ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಸಿಐಟಿಯು, ಕೆಪಿಆರ್ ಎಸ್ ನ ಉತ್ತರ ಕನ್ನಡ ಜಿಲ್ಲೆಯ ಪದಾಧಿಕಾರಿಗಳು, ಪ್ರತಿಭಟನಾ ಮೆರವಣಿಗೆಯಲ್ಲಿ ಇದ್ದರು.
ಆರ್ಥಿಕ ಅಸಮಾನತೆಯನ್ನು ಕಳೆದ ಹತ್ತು ವರ್ಷಗಳಲ್ಲಿ ಹೆಚ್ಚಾಗಿದೆ .ನಿರುದ್ಯೋಗ ಹೆಚ್ಚಾಗಿದೆ. ರಾಷ್ಟ್ರೀಯ ಸಂಪತ್ತನ್ನು ಕೆಲವೇ ಕೆಲವರು ಲೂಟಿ ಮಾಡಿದ್ದಾರೆಂದು ಸಿಐಟಿಯು ಧುರೀಣೆ ಯಮುನಾ ಅಪಾದಿಸಿದರು . ಕೆಲ ಬೇಡಿಕೆಗಳ ಮನವಿ ಪತ್ರವನ್ನು ತಹಶಿಲ್ದಾರರು ಮತ್ತು ಸಿಇಒ ಜಿಲ್ಲಾ ಪಂಚಾಯತಗೆ ಅರ್ಪಿಸಿದರು.
ಪೊಲೀಸರು ಬಿಗಿ ಬಂದೋಬಸ್ತ ಏರ್ಪಡಿಸಿದ್ದರು.
…..