ಕೋವಿಡ್-19ರ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಅ.7 ರವರೆಗೆ ಆನೆಕಾಲು ರೋಗ ನಿವಾರಣೆಗೆ ಸಾಮೂಹಿಕ ಔಷಧ ಸೇವನೆ ಕಾರ್ಯಕ್ರಮ: ಡಾ.ಸಿ.ಎಲ್ ಪ್ರಹಲ್ಲಾದ
ರಾಯಚೂರು.ಸೆ,28- ರಾಜ್ಯ ಸರ್ಕಾರ ಆನೆಕಾಲು ರೋಗ ನಿವಾರಣಾ ಕಾರ್ಯಕ್ರಮದಡಿಯಲ್ಲಿ ಇದೇ ಸೆ.27ರಿಂದ ಅಕ್ಟೋಬರ-7ರವರೆಗೆ ರಾಜ್ಯದ ಆಯ್ದ ಜಿಲ್ಲೆಯ ತಾಲೂಕುಗಳಲ್ಲಿ ಸಾಮೂಹಿಕ ಔಷಧ ಸೇವನೆ (ಎಂಡಿಎ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕುರಿತಂತೆ ಮಾತನಾಡಿದ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಎನ್ವಿಬಿಡಿಸಿಪಿ ವಿಭಾಗದ ಸಹ ನಿರ್ದೇಶಕರಾದ ಡಾ.ಸಿ.ಎಲ್.ಪ್ರಹಲ್ಲಾದ ಅವರು, ರಾಜ್ಯದ ಆಯ್ದ ಮೂರು ಜಿಲ್ಲೆಗಳಾದ ವಿಜಯಪುರ ಜಿಲ್ಲೆಯ ಸಿಂದಗಿ ಮತ್ತು ಮುದ್ದೇಬಿಹಾಳ, ಬಾಗಲಕೋಟೆ ಜಿಲ್ಲೆಯ ಹುನಗುಂದ ಮತ್ತು ಬದಾಮಿ ಹಾಗೂ ರಾಯಚೂರು ಜಿಲ್ಲೆಯ ದೇವದುರ್ಗ ಮತ್ತು ಲಿಂಗಸೂರು ತಾಲೂಕುಗಳಲ್ಲಿ ಇದೇ ಸೆ.27ರಿಂದ ಅಕ್ಟೋಬರ್ 7ರವರೆಗೆ ಸಾಮೂಹಿಕ ಔಷಧ ಸೇವನೆ (ಎಂಡಿಎ) ಕಾರ್ಯಕ್ರಮ ಹಮ್ಮಿಕೊಂಡಿದ್ದು, ಔಷಧ ಸೇವನೆಯಲ್ಲಿ ಗರಿಷ್ಠ ಪ್ರಗತಿ ಸಾಧಿಸಲು ಮಾಪ್-ಅಪ್ ಚಟುವಟಿಕೆಗಳನ್ನು 11ನೇ ಅಕ್ಟೋಬರ್ವರೆಗೆ ಮುಂದುವರೆಸಲಾಗುವುದು.
ಕೋವಿಡ್ದಂತಹ ತುರ್ತು ಪರಿಸ್ಥಿತಿಯಲ್ಲಿ ಕೋವಿಡ್ -19ನ್ನು ತಡೆಗಟ್ಟಲು ನಿಯಮಾನುಸಾರ ಕೈಗಳ ಸ್ವಚ್ಛತೆ, ಮಾಸ್ಕ್ಧರಿಸುವುದು ಮತ್ತು ಸಾಮಾಜಿಕಅಂತರ ಕಾಯ್ದುಕೊಳ್ಳುವ ಮೂಲಕ ಎಂಡಿಎ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಮುಂದುವರೆದು ನವೆಂಬರ್ ಮಾಹೆಯಲ್ಲಿ ಇನ್ನೂ ಮೂರು ಜಿಲ್ಲೆಗಳಾದ ಬೀದರ್, ಕಲ್ಬುರ್ಗಿ ಮತ್ತುಯಾದಗಿರಿ ಜಿಲ್ಲೆಗಳಲ್ಲಿಎಂಡಿಎಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಆನೆಕಾಲು ರೋಗವು (ಎಲ್ಎಫ್) ಸೊಳ್ಳೆಗಳಿಂದ ಹರಡುವರೋಗವಾಗಿದ್ದುಇದು ಲಿಂಫ್ಯಾಟಿಕ್ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಮತ್ತುಚಿಕಿತ್ಸೆ ಪಡೆಯದಿದ್ದಲ್ಲಿದೇಹದಭಾಗಗಳ ಅಸಹಜ ಬೆಳವಣಿಗೆಗೆ ಕಾರಣವಾಗುತ್ತದೆ. ಲಿಂಫ್ಊತ (ಕೈಕಾಲುಗಳ, ಸ್ಥನಗಳ ಊತ ) ಮತ್ತು ಹೈಡ್ರೋಸೀಲ್ ( ವೃಷಣಚೀಲದಊತ) ನಂತಹಅಂಗವೈಕಲ್ಯವು ಹೆಚ್ಚಾಗುತ್ತಿದೆ. ಇದರಿಂದ ಬಾಧಿತ ವ್ಯಕ್ತಿಯು ಕಳಂಕಿತನಂತೆ ಮತ್ತು ಸಮಾಜದಿಂದ ದೂರವಾಗಿ, ಉತ್ತಮ ಜೀವನೋಪಾಯದ ಅವಕಾಶದಿಂದ ವಂಚಿತರಾಗುತ್ತಾರೆ. ಲಿಂಫ್ಯಾಟಿಕ್ ವ್ಯವಸ್ಥೆಯುತೀವ್ರವಾಗಿ ಹಾನಿಗೊಳಗಾಗುವುದರಿಂದ ಗುಣಪಡಿಸಲಾಗದ ಮತ್ತು ಧೀರ್ಘಾವಧಿ ಚಿಕಿತ್ಸೆಯ ಅವಶ್ಯಕತೆಯಿರುವುದರಿಂದ ವರ್ಷದಲ್ಲಿ ಒಂದು ಬಾರಿ ಸಾಮೂಹಿಕ ಔಷಧ ಸೇವನೆ (ಎಂಡಿಎ) ಕಾರ್ಯಕ್ರಮದಲ್ಲಿ ಉಚಿತವಾಗಿ ನೀಡುವ ಫೈಲೇರಿಯಾ ತಡೆಗಟ್ಟುವ ಔಷಧಿಗಳ ಸೇವನೆಯಿಂದ ಈ ರೋಗವನ್ನು ಸುಲಭವಾಗಿ ತಡೆಯಬಹುದು.
ಎಂಡಿಎ ಸಮಯದಲ್ಲಿಔಷಧಿ ವಿತರಕರು ಸಮಸ್ಯಾತ್ಮಕ ಜಿಲ್ಲೆಗಳ ಆಯ್ದ ತಾಲ್ಲೂಕುಗಳಲ್ಲಿನ ಎಲ್ಲಾ ಅರ್ಹ ಫಲಾನುಭವಿಗಳಿಗೆ ಮನೆ – ಮನೆ ಭೇಟಿ ಅಭಿಯಾನದ ಮೂಲಕ ಉಚಿತವಾಗಿ ಔಷಧವನ್ನು (ಡಿಇಸಿ ಮತ್ತುಆಲ್ಬೆಂಡಜೋಲ್ ಗುಳಿಗೆಗಳನ್ನು) ನುಂಗಿಸುತ್ತಾರೆ. ಮಾಪ್-ಅಪ್ ಸುತ್ತಿನಲ್ಲಿ ತಪ್ಪಿಹೋದ ಪ್ರದೇಶಗಳಲ್ಲಿ ಗುಳಿಗೆಗಳನ್ನು ನುಂಗಿಸುತ್ತಾರೆ. ಈ ಗುಳಿಗೆಗಳನು 2ವರ್ಷದೊಳಗಿನ ಮಕ್ಕಳು,ಗರ್ಭಿಣಿಯರು ಹಾಗೂ ತೀವ್ರತರ ಕಾಯಿಲೆಯಿಂದ ಬಳಲುತ್ತಿರುವವರಿಗೆ ನೀಡಲಾಗುವುದಿಲ್ಲ. ಒಂದು ವೇಳೆ ಕೆಲವು ಜನರು ಔಷಧವನ್ನು ಸೇವಿಸಿ ಇನ್ನು ಕೆಲವರು ಸೇವಿಸದಿದ್ದಲ್ಲಿ ಇಡೀ ಸಮುದಾಯಕ್ಕೆ ಆನೆಕಾಲು ರೋಗದ ಸೋಂಕು ಅಪಾಯವನ್ನುಂಟು ಮಾಡುತ್ತದೆ. ಆದ್ದರಿಂದ ಸಮಸ್ಯಾತ್ಮಕ ಪ್ರದೇಶದ ಎಲ್ಲ ಅರ್ಹ ಜನರು ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಮುಂದೆಯೇ ಸೇವಿಸುವುದು ಹಾಗೂ ಇತರರಿಗೂ ಸೇವಿಸುವಂತೆ ಪ್ರೇರೇಪಿಸಬೇಕೆಂದು ಅವರು ಮನವಿ ಮಾಡಿಕೊಂಡಿ ಮನವಿ ಮಾಡಿದ್ದಾರೆ.




