Crime

ಎಲ್ಲ ತುರ್ತು ಸೇವೆಗಳಿಗೆ ಒಂದೇ ಸಂಖ್ಯೆ !

ಬೆಂಗಳೂರು,ಫೆ.1:- ಪೊಲೀಸ್, ಆರೋಗ್ಯ, ಅಗ್ನಿಶಾಮಕ ಸೇರಿದಂತೆ ಇನ್ನಿತರ ತುರ್ತು ಸೇವೆಗಳಿಗೆ ದೇಶಕ್ಕೆ ಒಂದೇ ನಂಬರ್ ಜಾರಿಯಾಗಿದ್ದು, ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ 112 ಸಂಖ್ಯೆ ಜಾರಿಯಾಗಿದೆ. ಹಿಂದೆ ಪೊಲೀಸ್, ಅಗ್ನಿಶಾಮಕ, ಆಂಬ್ಯುಲೆನ್ಸ್‍ಗೆ ಪ್ರತ್ಯೇಕ ತುರ್ತು ಸೇವಾ ನಂಬರ್‍ಗಳಿದ್ದವು. ಅವೆಲ್ಲವೂ ಈಗ ಒಂದೇ ಸಂಖ್ಯೆಯಡಿ ಬರಲಿದ್ದು, ಬೆಂಗಳೂರಿನಲ್ಲಿ 112 ಸಂಖ್ಯೆಯನ್ನು ನಿಗದಿಗೊಳಿಸಲಾಗಿದೆ.
ತುರ್ತು ಸಂದರ್ಭದಲ್ಲಿ ಪೊಲೀಸ್, ಆಂಬ್ಯಲೆನ್ಸ್, ಅಗ್ನಿಶಾಮಕದಳ ಸೇರಿದಂತೆ ಯಾರಿಗೆ ಫೋನ್ ಮಾಡಬೇಕು ಎಂಬ ಚಿಂತೆ ಕೊನೆಗೊಂಡಿದೆ. ಯಾವುದೇ ತುರ್ತು ಸಂದರ್ಭವಾದರೂ ಸರಿ 112 ಸಹಾಯವಾಣಿಗೆ ಕರೆ ಮಾಡಿ ಸಾಕು. ಎಲ್ಲಾ ರೀತಿಯ ನೆರವುಗಳು ತಕ್ಷಣವೇ ನಿಮ್ಮನ್ನು ತಲುಪುತ್ತವೆ.
ಈವರೆಗೂ ಪೊಲೀಸ್ ಇಲಾಖೆ ಸಹಾಯವಾಣಿಗೆ 100, ಅಗ್ನಿ ಶಾಮಕ ದಳಕ್ಕೆ 101, ಆಂಬ್ಯಲೆನ್ಸ್‍ಗೆ 102, ಆರೋಗ್ಯ ಕವಚ ಆಂಬ್ಯುಲೆನ್ಸ್‍ಗೆ 108 ಸಂಖ್ಯೆಗೆ ಕರೆ ಮಾಡಬೇಕಿತ್ತು. ಈ ಕಷ್ಟ ಕೊನೆಗೊಂಡಿದೆ.
100, 101, 102, 108 ಬದಲಾಗಿ 112 ಗೆ ಕರೆ ಮಾಡಿದರೆ ಬೆಂಕಿ ಅನಾಹುತ, ಅಪಘಾತ, ನೈಸರ್ಗಿಕ ವಿಕೋಪ ಸೇರಿದಂತೆ ಎಲ್ಲಾ ರೀತಿಯ ಸಹಾಯಗಳು ದೊರೆಯಲಿವೆ.
ರಾಷ್ಟ್ರೀಯ ಮಟ್ಟದಲ್ಲಿ ಪ್ರಾಯೋಗಿಕವಾಗಿ ಜಾರಿಯಾಗುತ್ತಿರುವ ಈ ಸಹಾಯವಾಣಿಗೆ ರಾಜ್ಯದಲ್ಲಿ ಆರು ಜಿಲ್ಲೆಗಳಲ್ಲಿ ಜಾರಿಯಾಗುತ್ತಿದೆ. ಬೆಂಗಳೂರಿನಲ್ಲಿ ಕಮಾಂಡಿಗ್ ಸೆಂಟರ್ ಸ್ಥಾಪಿಸಲಾಗಿದೆ. ಈ ಸೆಂಟರ್ ಎಲ್ಲಾ ಜಿಲ್ಲೆಗಳ ಮೂಲೆ ಮೂಲೆಗಳಿಂದ ಬರುವ ಕರೆಗಳ ಮೇಲೆ ನಿಗಾ ವಹಿಸಲಿದೆ. ಕರೆಗಳಿಗೆ ಸ್ಥಳೀಯವಾಗಿ ಜಿಲ್ಲಾ ಮಟ್ಟದಲ್ಲೇ ನೆರವಿನ ತಂಡಗಳು ಸ್ಪಂದಿಸಲಿವೆ.
ಹಾಲಿ ಅಸ್ತಿತ್ವದಲ್ಲಿರುವ ಸಹಾಯವಾಣಿಗಳನ್ನು ಹಂತ ಹಂತವಾಗಿ ತೆಗೆದು 112 ಸಹಾಯವಾಣಿಯನ್ನು ಖಾಯಂ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ಸಹಾಯವಾಣಿಗೆ ಸಂಚಾರಿ ವಾಹನಗಳಾಗಿ ಇನ್ನೋವ, ಸ್ಕಾರ್ಪಿಯೋದಂತಹ ಅತ್ಯಾಧುನಿಕ ವಾಹನ ನೀಡಲಾಗುತ್ತಿದೆ. ಬೆಂಗಳೂರು ಮಾದರಿಯಲ್ಲೆ ರಾಜ್ಯಾದ್ಯಂತ ತುರ್ತು ಸೇವೆಗಳು 10 ನಿಮಿಷದೊಳಗೆ ಸಿಗಲಿವೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button