CrimeUdupi

ಬೈಂದೂರು: ಬೈಕ್ ಕಳ್ಳನ ಬಂಧನ

ಬೈಂದೂರು: ಹೊಂಡಾ ಡಿಯೋ ಸ್ಕೂಟರ್ ಕಳ್ಳತನ‌ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಲಕ್ಷ್ಮಣ್ ಅಂಬಾಜಿ (26) ಎಂದು ಗುರುತಿಸಲಾಗಿದೆ.

ಯಡ್ತರೆ ಗ್ರಾಮದ ಶಿವಸಾಗರ ಹೋಟೆಲ್ ಎದುರು ನಿಲ್ಲಿಸಿದ HONDA DEO ಸ್ಕೂಟಿಯನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ತಿಮ್ಮೇಶ್ ಬಿ.ಎನ್, ಪಿ ಎಸ್ಸ್. ಐ, ಬೈಂದೂರು ಪೊಲೀಸ್ ಠಾಣೆ, ಸಿಬ್ಬಂದಿಗಳಾದ ಸುಜಿತ್ ಕುಮಾರ್, ಮಾಳಪ್ಪ ದೇಸಾಯಿ ಮತ್ತು ಸಂತೋಷ್ ರವರು ದಿನಾಂಕ 25/01/2024 ರಂದು ಆರೋಪಿತನಾದ ಲಕ್ಷ್ಮಣ್ ಅಂಬಾಜಿ (26) ಗುಳೇದಗುಡ್ಡ, ಎಂಬಾತನನ್ನು ಹಾವೇರಿ ಜಿಲ್ಲೆಯ ಬಂಕಾಪುರ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆದು ಆತನಿಂದ ಕಳವು ಮಾಡಿಕೊಂಡು ಹೋಗಿದ್ದ HONDA DEO ಸ್ಕೂಟಿಯನ್ನು ಸ್ವಾಧಿನ ಪಡಿಸಿ ಕೊಳ್ಳಲಾಗಿದೆ.

ಬಂಧಿತ ಆರೋಪಿ ಮೇಲೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 41/2022 ಕಲಂ: 379 ಐಪಿಸಿ ರಂತೆ ಪ್ರಕರಣ ದಾಖಲಾಗಿರುವ ಬಗ್ಗೆ ವಿಚಾರಣೆ ವೇಳೆ ತಿಳಿದು ಬಂದಿರುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button