ಶಂಕರನಾರಾಯಣ: ಹತ್ತನೇ ತರಗತಿಯ ವಿದ್ಯಾರ್ಥಿನಿ ಆಕಸ್ಮಿಕ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.
ಮೃತರನ್ನು ಅಕ್ಷಯ (16) ಎಂದು ಗುರುತಿಸಲಾಗಿದೆ ಇವರು ಅಮಾಸೆಬೈಲು ಪ್ರೌಢ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಶಾಲೆ ಮುಗಿಸಿ ವಾಪಾಸ್ಸು ಮನೆಗೆ ಬಂದು ಮನೆಯ ಪಕ್ಕದಲ್ಲಿರುವ ಬಾವಿಯ ನೀರನ್ನು ಕೃಷಿ ಅಡಿಕೆ ತೋಟಕ್ಕೆ ಬಿಡುತ್ತಿದ್ದರು. ಮಾರ್ಚ್ 11 ರಂದು ಬೆಳಿಗ್ಗೆ 8:00 ಗಂಟೆಗೆ ಶಾಲೆಗೆ ಹೋಗಿ, ಸಂಜೆ 5 ಗಂಟೆಗೆ ಮನೆಯ ಪಕ್ಕದಲ್ಲಿರುವ ಬಾವಿಯ ನೀರನ್ನು ಕೃಷಿ ಅಡಿಕೆ ತೋಟಕ್ಕೆ ನೀರು ಬೀಡಲು ಬಾವಿಯ ಹತ್ತಿರ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 11/2024 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ