ಶಿವಮೊಗ್ಗದಲ್ಲಿ ಡಬಲ್‌ ಮರ್ಡರ್‌ | ಎಸ್ಪಿ ಹೇಳಿದ್ದೇನು?

ನಗರದ ಲಷ್ಕರ್ ಮೊಹಲ್ಲ ಸರ್ಕಲ್‌ನಲ್ಲಿ ಇಬ್ಬರು ಯುವಕರ (Shivamogga double murder) ಹತ್ಯೆಯಾಗಿದೆ. ಇಂದು ಸಂಜೆ ಘಟನೆ ಸಂಭವಿಸಿದೆ. ವಿಚಾರ ತಿಳಿಯುತ್ತಿದ್ದಂತೆ ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಚಪ್ಪಡಿ ಕಲ್ಲು, ಸೈಕಲ್ ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಶೋಯಬ್ ಅಲಿಯಾಸ್ ಸೆಬು ಹತ್ಯೆಯಾಗಿದೆ. ಇನ್ನೊಬ್ಬನ ಗುರುತು ಪತ್ತೆ ಹಚ್ಚುತ್ತಿರುವ ಪೊಲೀಸರು.

ಕೊಲೆಯಾದವರು ವ್ಯಕ್ತಿಯೊಬ್ಬನ ಮೇಲೆ ದಾಳಿಗೆ ಬಂದಿದ್ದರು ಎನ್ನಲಾಗಿದೆ. ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಎಸ್ಪಿ ಹೇಳಿದ್ದೇನು?

‘ಸಂಜೆ 5.30ರ ಹೊತ್ತಿಗೆ ಸ್ಥಳೀಯ ವ್ಯಕ್ತಿಯೊಬ್ಬನ ಮೇಲೆ ಹೊರಗಿನಿಂದ ಬಂದ ಯುವಕರು ಹಲ್ಲೆ ನಡೆಸಿದರು. ಈ ವೇಳೆ ಸ್ಥಳೀಯ ವ್ಯಕ್ತಿಯ ಸ್ನೇಹಿತರು ಹಲ್ಲೆಕೋರರ ಮೇಲೆ ದಾಳಿ ನಡೆಸಿದರು. ಚೂಪಾದ ವಸ್ತುಗಳಿಂದ ಹಲ್ಲೆ ನಡೆಸಿ, ಕಲ್ಲುಗಳನ್ನು ಎತ್ತಿ ಹಾಕಿ ಹತ್ಯೆ ಮಾಡಿದ್ದಾರೆ. ಸುಹೇಲ್‌ ಅಲಿಯಾಸ್‌ ಖಲಂದರ್‌ ಅಲಿಯಸ್‌ ಸೇಬು ಮತ್ತು ಗೌಸ್‌ ಎಂಬುವವರು ಹತ್ಯೆಯಾಗಿದ್ದಾರೆ. ಈ ಪೈಕಿ ಒಬ್ಬಾತ ಕೆ.ಆರ್‌.ಪುರಂ ನಿವಾಸಿ. ಮತ್ತೊಬ್ಬ ಅಣ್ಣಾನಗರದವನು. ಆರೋಪಿಗಳ ಗುರುತು ಪತ್ತೆಯಾಗಿದೆ, ಬಂಧಿಸಲಾಗುತ್ತದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ (sp Mithun Kumar) ತಿಳಿಸಿದರು.

Latest Indian news

Popular Stories