
Crime
ಮೆಡಿಕಲ್ ಮೈಕ್ರೋಬಯಾಲಜಿ ಪುಸ್ತಕದಲ್ಲಿ ತಬ್ ಲೀಗಿ ಜಮಾತ್ ಬಗ್ಗೆ ಅವಹೇಳನಕಾರಿ ಬರಹ ಎಸ್‌ಐಒ ಪ್ರತಿಭಟನೆಯ ನಂತರ ಬರಹವನ್ನು ತೆಗೆದುಹಾಕಿದ ಜೆ ಪಿ ಪಬ್ಲಿಕೇಶನ್ಸ್
‘ಎಸೆನ್ಷಿಯಲ್ಸ್ ಆಫ್ ಮೆಡಿಕಲ್ ಮೈಕ್ರೋಬಯಾಲಜಿ’ ಪುಸ್ತಕದ ಲೇಖಕರು ಕ್ಷ ತಮ್ಮ ಪುಸ್ತಕದ ಮರುಮುದ್ರಣದಲ್ಲಿ ಕೊರೋನ ರೋಗ ಹರಡುವಿಕೆಯಲ್ಲಿ ತಬ್ ಲೀಗಿ ಜಮಾತ್ ಪಾತ್ರದ ಬಗ್ಗೆ ಅವಹೇಳನಕಾರಿ ಬರಹವನ್ನು ಮುದ್ರಿಸಿದ್ದಾರೆ. ಈ ಪುಸ್ತಕವು ದ್ವಿತೀಯ ವರ್ಷದ ಎಂಬಿಬಿಎಸ್ ಕೋರ್ಸ್ ನ ಪಠ್ಯ ಕ್ರಮದಲ್ಲಿದೆ.

ಇದರ ಬಗ್ಗೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್‌ಐಒ) ಪದಾಧಿಕಾರಿಗಳು ಜೆ ಪಿ ಪಬ್ಲಿಕೇಶನ್ಸ್‌ನೊಂದಿಗೆ ಮಾತನಾಡಿ, ತೀವ್ರ ವಿಷಾದ ವ್ಯಕ್ತಪಡಿಸಿ ಈ ಬರಹವನ್ನು ಪುಸ್ತಕದಿಂದ ತೆಗೆದುಹಾಕುವಂತೆ ಒತ್ತಾಯಿಸಿದ್ದರು.
ಇದರ ಪರಿಣಾಮ ಪುಸ್ತಕದ ಲೇಖಕರಾದ ಡಾ.ಅಪುರ್ಬಾ ಶಾಸ್ತ್ರಿ ಮತ್ತು ಡಾ. ಸಂಧ್ಯಾ ಭಟ್, ಕ್ಷಮೆಯಾಚಿಸಿ ಬರಹವನ್ನು ಪುಸ್ತಕದಿಂದ ತೆಗೆದುಹಾಕಲಾಗುವುದು ಎಂದು ತಿಳಿಸಿದ್ದಾರೆಂದು ಎಸ್‌ಐಒ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.





