ಎಸ್. ಎಂ. ಆರ್. ಪಬ್ಲಿಕ್ ಸ್ಕೂಲ್ ವಾರ್ಷಿಕ ಕ್ರೀಡಾ ಕೂಟ

ಬಂಟ್ವಾಳ. ಡಿ.10: ಇಲ್ಲಿಗೆ ಸಮೀಪದ ಸಜೀಪ ಮುನ್ನೂರು ಗ್ರಾಮದಲ್ಲಿರುವ ಎಸೆಮ್ಮಾರ್ ಪಬ್ಲಿಕ್ ಸ್ಕೂಲ್ ಇದರ ವಾರ್ಷಿಕ ಕ್ರೀಡಾ ಕೂಟ ಇತ್ತೀಚೆಗೆ (ಡಿ.02.2023) ರಂದು ಬಹಳ ವಿಜೃಂಭಣೆಯಿಂದ ಜರುಗಿತು. ಎಸೆಮ್ಮಾರ್ ಎಜುಕೇಷನ್ ಅಕಾಡೆಮಿ ಇದರ ಪ್ರಧಾನ ಕಾರ್ಯದರ್ಶಿ ಶ್ರೀ ರಿಫಾತ್ ಅಹಮದ್ ರವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾದ ಈ ಕ್ರೀಡೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಷ್ಟೀಯ ಮಟ್ಟದ ಕ್ರೀಡಾ ಪಟು ಶ್ರೀಯುತ ರವಿರಾಜ್ ಕುಮಾರ್ ರವರು, ಕ್ರೀಡಾ ಕೂಟದ ವಿವಿಧ ಬಗೆಯ ಸ್ಪರ್ಧಾ ಪಂದ್ಯಾವಳಿಗೆ ಚಾಲನೆಯನ್ನು ನೀಡಿದರು.

IMG 20231211 WA0056 Crime

ಬಳಿಕ ವಿದ್ಯಾರ್ಥಿಗಳ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು.
ಸಂಧ್ಯಾ ಸಮಯದವರೆಗೆ ಮುಂದುವರಿದ ಕ್ರೀಡಾ ಸ್ಪರ್ಧೆಗಳಲ್ಲಿನ ವಿಜೇತ ಕ್ರೀಡಾಳುಗಳಿಗೆ ಕೊನೆಯಲ್ಲಿ, ಪ್ರಶಸ್ತಿ ಪತ್ರ, ಫಲಕ ಹಾಗೂ ಬಹುಮಾನಗಳನ್ನು ನೀಡಿ ಸನ್ಮಾನಿಸಲಾಯಿತು.
ಶಾಲಾ ಆಡಳಿತ ವರ್ಗ, ಮುಖ್ಯೋಪಾಧ್ಯಾಯಿನಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿ ವೃಂದ ಕಾರ್ಯಕ್ರಮದಲ್ಲಿ ಹಾಜರಿದ್ದರು.

Latest Indian news

Popular Stories