
ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ನಮ್ಮ ತನಿಖೆಯಾಗಿದೆ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿಯ ತನಿಖೆಯಾಗಲಿ!
ಮಂಗಳೂರು: ದೇಶದಲ್ಲಿಯೇ ಭಾರೀ ಸಂಚಲನ ಸೃಷ್ಟಿಸಿದ್ದ
2012ರ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ
ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ
ಹಾಗೂ ಆಕೆಯ ಮಾವ ವಿಠಲ ಗೌಡನ ಮೇಲೆ ನಮಗೆ
ಅನುಮಾನವಿದೆ. ಇವರ ತನಿಖೆಯಾದಲ್ಲಿ ಸತ್ಯ
ಬಯಲಾಗುತ್ತದೆ ಎಂದು ಸೌಜನ್ಯಾ ಮನೆಯವರು ಸಂಶಯ ವ್ಯಕ್ತಪಡಿಸಿರುವ ಧೀರಜ್ ಕೆಲ್ಲ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಆರೋಪ ಹೊತ್ತಿದ್ದ ಧರ್ಮಸ್ಥಳದ ಧೀರಜ್ ಕೆಲ್ಲ, ಉದಯ ಜೈನ್, ಹಾಗೂ ಮಲ್ಲಿಕ್ ಜೈನ್ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಈ ವೇಳೆ ಧೀರಜ್
ಕೆಲ್ಲ ಮಾತನಾಡಿ, ಮಹೇಶ್ ಶೆಟ್ಟಿ ತಿಮರೋಡಿ ದುಡ್ಡು
ಮಾಡುವ ಏಕೈಕ ಉದ್ದೇಶದಿಂದ ಸೌಜನ್ಯಾ ಮನೆಯವರನ್ನು ತಲೆಕೆಡಿಸಿ ನಾವು ತನಿಖೆಗೆ ಹಾಜರಾಗಿದ್ದರೂ ನಮ್ಮ ಮೇಲೆ ಸುಖಾಸುಮ್ಮನೆ ಅತ್ಯಾಚಾರ, ಕೊಲೆ ಆರೋಪ ಮಾಡಿದ್ದಾರೆ. ಅವರಿಗೆ ಅಣ್ಣಪ್ಪನ ಮೇಲೆ ಭಕ್ತಿ ಇಲ್ಲದಿದ್ದರೂ ಧರ್ಮಸ್ಥಳಕ್ಕೆ ಆಣೆ ಪ್ರಮಾಣಕ್ಕೆ ಕರೆಯುತ್ತಾರೆ.ತಿಮರೋಡಿ ಗಂಗ ರೌಡಿಶೀಟರ್ ಧರ್ಮಸ್ಥಳ ಕ್ಷೇತ್ರಕ್ಕೆ ಪ್ರವೇಶಿಸಿದರೆ ಅಲ್ಲಿ ಬ್ರಹ್ಮಕಲಶವೇ ಮಾಡಬೇಕಾದೀತು.
ಆದ್ದರಿಂದ ನಾವು ಸೌಜನ್ಯಾ ಅತ್ಯಾಚಾರ ಅತ್ಯಾಚಾರ,
ಕೊಲೆ ನಾವು ಮಾಡಿಲ್ಲವೆಂದು ಕಾನತ್ತೂರು ಕ್ಷೇತ್ರಕ್ಕೆ ಬಂದು
ಆಣೆ – ಪ್ರಮಾಣ ಮಾಡುತ್ತೇವೆ. ತಿಮರೋಡಿಯವರಿಗೆ
ಧೈರ್ಯ ಇದ್ದಲ್ಲಿ ಅವರು ಅಲ್ಲಿಗೆ ಅಂದು ಬಂದು ನಾವೇ
ಆ ಅತ್ಯಾಚಾರ ಮಾಡಿರುವುದಾಗಿ ಹೇಳಲಿ ಎಂದು
ಸವಾಲೆಸೆದರು.
ಆಣೆ – ಪ್ರಮಾಣವನ್ನು ಒಂದು ವಾರದೊಳಗೆ ನಾವು
ಮಾಡಲಿದ್ದೇವೆ. ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯಾ
ಮನೆಯವರು ಹಾಗೂ ಮಾಧ್ಯಮಗಳ ಸಮಕ್ಷಮದಲ್ಲಿಯೇ
ನಾವು ಕಾನತ್ತೂರು ಕ್ಷೇತ್ರದಲ್ಲಿ ಆಣೆ ಮಾಡಲಿದ್ದೇವೆ. ಈ
ಪ್ರಕರಣದ ಬಗ್ಗೆ 2014ರಲ್ಲಿ ಜುಲೈ ಹಾಗೂ ಆಗಸ್ಟ್ನಲ್ಲಿ
ಸಿಬಿಐ ಬೆಳ್ತಂಗಡಿಯಲ್ಲಿ ಎರಡೆರಡು ಬಾರಿ ತನಿಖೆ ಮಾಡಿತ್ತು.
ಚೆನ್ನೈ, ಬೆಂಗಳೂರಿಗೂ ಕರೆಸಿ ತನಿಖೆ ಮಾಡಲಾಗಿದೆ. ರಕ್ತ ಪರೀಕ್ಷೆ,ಡಿಎನ್ಎ ತಪಾಸಣೆ, ಮಂಪರು ಪರೀಕ್ಷೆ
ನಡೆಸಿದ್ದಾರೆ. ಆದರೂ ನಮ್ಮ ಮೇಲೆ ಈಗಲೂ ಆರೋಪ ಹೊರಿಸುತ್ತಿರುವುದು ಸರಿಯಲ್ಲ.ಆದ್ದರಿಂದ ತಿಮರೋಡಿ ಎಷ್ಟು ದೊಡ್ಡ ರೌಡಿಯಾದರೂ ನಾವು ಎದುರಿಸುತ್ತೇವೆ. ತಿಮರೋಡಿ ನೈಜ ಆರೋಪಿಗಳ ಪತ್ತೆಗೆ ಐಜಿ ಕಚೇರಿಗೆ ಹೋಗಿ ಧರಣಿ ಮಾಡಲಿ ಎಂದು ಆಗ್ರಹಿಸಿದರು.




