Crime

ಮೊಬೈಲ್ ಕೊಡಿಸಿಲ್ಲ ಎಂದು ಆತ್ಮಹತ್ಯೆಗೆ ಯತ್ನಿಸಿದ ಯುವಕ ಮೃತ್ಯು

ಚಿತ್ರದುರ್ಗ :ಹೊಸ ಮೊಬೈಲ್ ಬೇಕೆಂದು ಅಜ್ಜನ ಬಳಿ ಹಠ ಮಾಡುತ್ತಿದ್ದ ಯುವಕ ಆತ್ಮಹತ್ಯೆ ಗೆ ಯತ್ನಿಸಿದ ಪರಿಣಾಮ ಮೃತಪಟ್ಟ
ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕೊಳಾಳ್​ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.

ಯಶವಂತ (20) ಎನ್ನುವ ಯುವಕ ಮೊದಲಿದ್ದ ಫೋನ್ ಕಳೆದುಕೊಂಡು ಪರದಾಡುತ್ತಿದ್ದ ಹೊಸ ಮೊಬೈಲ್​ ಕೊಡಿಸುವಂತೆ ಅಜ್ಜನ ಬಳಿ ಬೇಡಿಕೆ ಇಟ್ಟಿದ್ದ. ಆದ್ರೆ, ಅಜ್ಜ ಈರುಳ್ಳಿ ಬೆಳೆ ಬಂದ ಮೇಲೆ ಕೊಡಿಸುತ್ತೇನೆಂದು ಹೇಳಿದ್ದ. ಆದರೂ ಸುಮ್ನೆ ಇರದ ಮೊಮ್ಮಗ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ದುರದೃಷ್ಟವಶಾತ್ ಯುವಕನ ಪ್ರಾಣ ಪಕ್ಷಿ ಹಾರಿಹೋಗಿದೆ.

ಅಕ್ಟೋಬರ್ 8ರಂದು ಹಿಂದೂ ಮಹಾಗಣಪತಿ ವಿಸರ್ಜನೆ ವೇಳೆ ಯಶವಂತ್​ ಮೊಬೈಲ್ ಕಳೆದುಕೊಂಡಿದ್ದ. ಈ ಹಿನ್ನೆಲೆಯಲ್ಲಿ ಕೈಯಲ್ಲಿ ಮೊಬೈಲ್​ ಇಲ್ಲದೇ ಕಂಗಾಲಾಗಿದ್ದ.ಈ ವೇಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅಜ್ಜನಿಗೆ ಹೆದರಿಸಿದ್ದ ಆದರೆ ವಿಷ ಸೇವಿಸಿದ ಕೂಡಲೇ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಯುವಕ ತನ್ನ ಪ್ರಾಣ ಕಳೆದುಕೊಂಡಿದ್ದಾನೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button