ಸುರತ್ಕಲ್: ಬಿದ್ದ ಹೊಂಡದಲ್ಲೇ ಸ್ಕೂಟರ್ ನಿಲ್ಲಿಸಿ ಪ್ರತಿಭಟಿಸಿದ ಸವಾರ

ಸುರತ್ಕಲ್: ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾಗಿರುವ ಬೃಹತ್ ಗಾತ್ರದ ಹೊಂಡಕ್ಕೆ ಬಿದ್ದು ಗಾಯಗೊಂಡಿದ್ದ ಸ್ಕೂಟರ್ ಸವಾರ ತನ್ನ ಸ್ಕೂಟರ್ ನ್ನು ಅದೇ ಹೊಂಡದಲ್ಲಿ ನಿಲ್ಲಿಸಿ ಸ್ವಲ್ಪ ಹೊತ್ತು ಪ್ರತಿಭಟಿಸಿದರು.

ನಂತರ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ಬಂದು ಸ್ಕೂಟರ್ ತೆರವುಗೊಳಿಸಿದ್ದಾರೆ. ಈ ಮರಣ ಗುಂಡಿಗೆ ಬಿದ್ದು ಸತ್ತರೆ ಹೊಣೆ ಹೊರುವವರು ಯಾರೆಂದು ಆಕ್ರೋಶ ಹೊರ ಹಾಕಿದ್ದಾರೆ.

ಈ ಪ್ರದೇಶದಲ್ಲಿ ಶಾಲಾ ಮಕ್ಕಳು ಬಿದ್ದರೆ ಹೊಣೆ ಯಾರು? ಎಂದು ಈ ಸಂದರ್ಭದಲ್ಲಿ ಸವಾರ ಪ್ರಶ್ನಿಸಿದ್ದಾರೆ. ಸ್ಕೂಟರ್ ನಲ್ಲಿ ಬಿದ್ದ ಪರಿಣಾಮ ಸವಾರನ ಕಾಲಿಗೆ ಗಾಯವಾಗಿದೆ.

Latest Indian news

Popular Stories