ಉಡುಪಿ: ವಿಪರೀತ ಮಳೆ; ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ವಿಪರೀತ ಮಳೆಯಾಗುತ್ತಿದ್ದು ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡು ನೆರೆ ಭೀತಿ ಎದುರಾಗಿದೆ.

ಜಿಲ್ಲೆಯ ಪ್ರಮುಖ ನದಿಗಳು ತುಂಬಿ ಹರಿಯುತ್ತಿದ್ದು ಇದೇ ರೀತಿ ಮಳೆ ಮುಂದುವರಿದರೆ ನದಿ ತೀರಾ ಪ್ರದೇಶಗಳು ನೆರೆಗೆ ತುತ್ತಾಗುವ ಸಾಧ್ಯತೆ ಕಂಡು ಬರುತ್ತಿದೆ. ಮಳೆಯೊಂದಿಗೆ ಬೀರುಸಾದ ಗಾಳಿ ಬೀಸುತ್ತಿದ್ದು ಕೆಲವೆಡೆ ಮರಗಳು ಧರೆಗುರುಳಿವೆ.

ಮನೆಗೆ ಹಾನಿ:

ಮೂಳೂರು ಬಿಲ್ಲವರ ಸಂಘದ ಮುಂಭಾಗದ ಉದಯ್ ಪೂಜಾರಿ ಎಂಬವರ ಮನೆಗೆ ಜೂ.26ರ ಬುಧವಾರ ಬೆಳಿಗ್ಗೆ ಮರಬಿದ್ದು ಅಪಾರ ಹಾನಿಯುಂಟಾಗಿದೆ.

ಬುಧವಾರ ಬೆಳಿಗ್ಗೆ ಬೀಸಿದ ಭಾರಿ ಗಾಳಿಯಿಂದಾಗಿ ಮರ ಬಿದ್ದಿದ್ದು ಹೆಂಚಿನ ಮನೆಯ ಆಧಾರವಾಗಿರುವ ಜಂತಿ, ಪಕ್ಕಾಸುಗಳು ಇದು ಬಚ್ಚಲು ಕೋಣೆ, ಶೌಚಾಲಯಕ್ಕೆ ಹಾನಿಯುಂಟಾಗಿದೆ.

ಅರೇಂಜ್ ಅಲರ್ಟ್:

ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಜೂನ್ 26 ಮತ್ತು 27 ರಂದು “ಆರೆಂಜ್ ಅಲರ್ಟ್” ನೀಡಲಾಗಿದೆ, ಜೂನ್ 28 ಮತ್ತು 29 ರಂದು “ಯಲ್ಲೋ ಅಲರ್ಟ್” ನೀಡಲಾಗಿದೆ. ಈ ಅವಧಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಮಕ್ಕಳ ಬಗ್ಗೆ ಇರಲಿ ಎಚ್ಚರ:

ಬಹುತೇಕ ತೋಡು, ಕೆರೆ, ಬಾವಿಗಳು ಭಾರೀ ಮಳೆಯ ಕಾರಣ ತುಂಬಿಕೊಂಡಿದ್ದು ವಿದ್ಯಾರ್ಥಿಗಳು ಮತ್ತು ಪುಟ್ಟ ಮಕ್ಕಳ ಕುರಿತು ವಿಶೇಷ ಮುಂಜಾಗ್ರತೆ ವಹಿಸಬೇಕಾಗಿದೆ. ಮಕ್ಕಳು ನೀರು ಹರಿಯುವ ಕಡೆಗೆ ಹೋಗದಂತೆ ನಿಗಾ ವಹಿಸಬೇಕಾಗಿದೆ.

ಇನ್ನು ಸಮುದ್ರವು ಪ್ರಕ್ಷುಬ್ಧವಾಗಿದ್ದು ಯಾರೂ ಕೂಡ ಸಮುದ್ರಕ್ಕೆ ಇಳಿಯದಂತೆ ಈಗಾಗಲೇ ಜಿಲ್ಲಾಡಳಿತ ಸೂಚನೆ ನೀಡಿದೆ. ಪ್ರಮುಖ ಬೀಚ್ ಗಳಲ್ಲಿ ಪ್ರವಾದಿಗರನ್ನು ನಿರ್ಬಂಧಿಸಲಾಗಿದೆ.

Latest Indian news

Popular Stories